ರಾಷ್ಟ್ರೀಯ ಹೆದ್ದಾರಿ ಎನ್.ಎಚ್.4 ಕಾಮಗಾರಿ ಸಂಪೂರ್ಣ ಕಳಪೆ; ಕೇಳುವವರ್ಯಾರು?

ರಸ್ತೆಯ ಧೂಳಿನಿಂದ ಆರೋಗ್ಯ ಸಮಸ್ಯೆ ಸಮೀಪದ ಮಳಿಗಿಗೆ ಧೂಳಿನಿಂದ ವ್ಯಾಪಾರ ವಹಿವಾಟು ಮಾಡಲು ಕಷ್ಟವಾಗಿದ್ದು, ನಮ್ಮ ಗೋಳು ಕೇಳುವವರು ಯಾರು? ಎಂದು ಹನುಮಂತಪ್ಪ ಬಂಡಿವಡ್ಡರ ಪ್ರಶ್ನಿಸಿದ್ದಾರೆ. ಪ್ರಾಧಿಕಾರದವರು ಪಟ್ಟಣದ ಸಾಯಿ ನಗರ ಹತ್ತಿರ, ಖುμರ್Áಪೂರ ಕ್ರಾಸ್ ಹತ್ತಿರ ಹಾಗೂ ಪ್ರವಾಸಿ ಮಂದಿರದ ಎದುರಿಗೆ ಅಂಡರ ಬ್ರೀಡ್ಜನ್ನು ಇಲ್ಲಿಯವರೆಗೆ ನಿರ್ಮಿಸಿಲ್ಲ ಮತ್ತು ಅವರು ಮಾಡುತ್ತಿರುವ ಎಲ್ಲ ಕಾಮಗಾರಿಗಳು ಕಳಪೆಯಾಗಿದೆ ಎಂದು ಆರೋಪಿಸಿ ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷ ಹನುಮಂತಪ್ಪ ಬಂಡಿವಡ್ಡರ ಗಂಗಿಭಾವಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಮನವಿ ಸಲ್ಲಿಸಿದರು. ಅಲ್ಲದೇ ಮೇಲಿನಿಂದ ಮೇಲೆ ಅಪಘಾತಗಳು ಸಂಭವಿಸಿ ಹಲವಾರು ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಅದರಿಂದ ಬ್ರಿಡ್ಜ್ ಮಾಡಲು ಕ್ರಮ ಕೈಗೊಳ್ಳಬೇಕು ಒತ್ತಾಯ ಮಾಡಿದರು.