ತೆರವು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಪ್ರತಿಭಟನೆ
ಮೈಸೂರಿನಲ್ಲಿ ಪುರಾತನ ದೇವಾಲಯಗಳ ಧ್ವಂಸ ಹಾಗೂ ರಾಜ್ಯದಾದ್ಯಂತ ದೇವಸ್ಥಾನಗಳನ್ನು ತೆರವುಗೊಳಿಸುವ ಸರ್ಕಾರದ ನಡೆಯನ್ನು ಖಂಡಿಸಿ, ಹಿರೇಕೆರೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳದ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟಿಸಿದರು. ಪುರಾತನ ದೇವಸ್ಥಾನವನ್ನು ಬಲವಂತದಿಂದ ಒಡೆದು ಹಾಕಿರುವುದು ಸರಿಯಲ್ಲ. ದೇವಾಲಯಗಳನ್ನು ತೆರವುಗೊಳಿಸುವ ನಿರ್ಧಾರದಿಂದ ಸರ್ಕಾರ ತಕ್ಷಣ ಹಿಂದೆ ಸರಿಯಬೇಕು ಮತ್ತು ಒಡೆದು ಹಾಕಿರುವ ದೇವಾಲಯಗಳ ಪುನರ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅನಿಲ್ ಹಲವಾಗಿಲು, ವಿನಾಯಕ ಕೆ, ಮಂಜು ಕ್ಷತ್ರಿಯ, ಸೋಮು, ಕಿಟ್ಟಿ ಪಾಟೀಲ್, ಮುತ್ತು ಬೆಣ್ಣೆ, ರಾಕೇಶ್ ಬಾಳಿಕಾಯಿ, ಗುರು ಕರಡಿ, ಅಭಿ, ಗಣೇಶ್ ಸೇರಿದಂತೆ ಬಜರಂಗದಳದ ಕಾರ್ಯಕರ್ತರು ಇದ್ದರು