ರಾತ್ರೋ ರಾತ್ರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ.
ಹಲ್ಲೆ ಖಂಡೊಸಿ ರಾತ್ರೋ ರಾತ್ರಿ ನೂರಾರು ವಿದ್ಯಾರ್ಥಿಗಳಿಂದ ಪ್ರತಿಭಟನೆ.
ಸೇರಿದಂತೆ ಮೆಸ್‌ಗಳಲ್ಲಿ ಊಟ ಮುಗಿಸಿಕೊಂಡು ಪಿಜಿ ಹಾಗೂ ರೂಮ್‌ಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ, ಅಪರಿಚಿತ ಯುವಕರು ತಂಡ ಹಲ್ಲೆ ಮಾಡಿ ಯುವಕರಲ್ಲಿ ಆತಂಕ ಮೂಡಿಸಿದ ಘಟನೆ ಧಾರವಾಡಲ್ಲಿ ನಡೆದಿದೆ. ನಗರದ ಸಪ್ತಾಪೂರ ಬಳಿ ಘಟನೆ ನಡೆದಿದೆ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಓದಲು ಬಂದಂತಹ ವಿದ್ಯಾರ್ಥಿಗಳು ಕಳೆದ ದಿನ ತಡ ರಾತ್ರಿ ತಮ್ಮ ಪಾಡಿಗೆ ತಾವು ಊಟ ಮುಗಿಸಿಕೊಂಡು ರೂಮಗಳಿಗೆ ಹಾಗೂ ಓದಲು ಲೈಬ್ರರಿಗೆ ತೆರಳುತ್ತಿದ್ದರು. ರಸ್ತೆಯಲ್ಲಿ ಬಂದಂತಹ ದುಷ್ಕರ್ಮಿಗಳ ಯುವಕರ ತಂಡವೊಂದು ಏಕಾಏಕಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ, ಅಕ್ಕ ಪಕ್ಕದ ಮನೆಗಳಿಗೆ ಕಲ್ಲುಗಳನ್ನು ಎಸೆದು ಆತಂಕ ಮೂಡಿಸಿದ್ದಾರೆ. ಅಪರಿಚಿತರ ಹಲ್ಲೆಯಿಂದ ಮೂವರು ಜನ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಸ್ಥಳಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನೂ ಹಲ್ಲೆಗೆ ಒಳಗಾದ ವಿದ್ಯಾರ್ಥಿಗಳ ಸ್ನೇಹಿತರು ಹಲ್ಲೇಕೋರರನ್ನು ಪ್ರಶ್ನೆ ಮಾಡಲು ಆಗಮಿಸುತ್ತಿದಂತೆ ಅಪರಿಚಿತ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅನಂತರ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳುತ್ತಿದಂತೆ ಸ್ಥಳಕ್ಕೆ ಧಾರವಾಡ ಉಪನಗರ ಠಾಣೆಯ ಪೊಲೀಸರು, ವಿದ್ಯಾಗಿರಿ ಠಾಣೆಯ ಪೊಲೀಸರು ಹಾಗೂ ಎಸಿಪಿ ಅನುಷಾರವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹಲ್ಲೆಗೆ ಒಳಗಾದ ವಿದ್ಯಾರ್ಥಿಗಳಿಂದ ಹಾಗೂ ಸ್ಥಳಿಯರಿಂದ ಹಲ್ಲೇಕೋರರ ಕುರಿತು ಮಾಹಿತಿ ಪಡೆದುಕೊಂಡರು. ನಂತರ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ ಪೊಲೀಸರ ತಂಡ, ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಹಲ್ಲೇಕೋರರಲ್ಲಿ ಓರ್ವನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ