ನಾನು ಅಕ್ರಮವಾಗಿ ಸಂಪಾದನೆ ಮಾಡಿದರೆ, ಅಷ್ಟೂ ಆಸ್ತಿಯನ್ನು ದಾನ ಮಾಡುತ್ತೇನೆ: ಸಿ.ಟಿ.ರವಿ

ನಾನು ಅಕ್ರಮವಾಗಿ ಸಂಪಾದನೆ ಮಾಡಿದರೆ, ಅಷ್ಟೂ ಆಸ್ತಿಯನ್ನು ದಾನ ಮಾಡುತ್ತೇನೆ: ಸಿ.ಟಿ.ರವಿ

ಬೆಳಗಾವಿ: ನಾನು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದೇನೆ ಎನ್ನುವುದನ್ನು ಕಾಂಗ್ರೆಸ್‌ ಸಾಬೀತು ಮಾಡಿದರೆ, ಅಷ್ಟೆಲ್ಲಾ ಆಸ್ತಿಯನ್ನು ದಾನ ಮಾಡುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಮಾಜಿ ಸಿಎಂ ಬಿ.ಎಸ್‌‌.ಯಡಿಯೂರಪ್ಪ ಸಂಪುಟದಲ್ಲಿ 7 ತಿಂಗಳು ಕೋವಿಡ್‌ನಲ್ಲಿ ಹೋಯಿತು. ನಾನೆಲ್ಲಿ ಅಕ್ರಮ ಮಾಡಿದ್ದೇನೆ. ನಾನು ನನ್ನ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಅಪ್ಡೇಟ್‌ ಮಾಡುತ್ತೇನೆ. ಬೇರೆ ಆಸ್ತಿ ಇದೆ ಎಂದಾದರೆ, ಆ ಆಸ್ತಿಯನ್ನು ದಾನ ಮಾಡುತ್ತೇನೆ ಎಂದರು.