ಶೀಘ್ರವೇ 2 ಸಾವಿರ ಬಸ್ ಚಾಲಕರ ನೇಮಕ: ಸಚಿವ ಶ್ರೀರಾಮುಲು

ಬೆಳಗಾವಿ: ಶೀಘ್ರವೇ 2 ಸಾವಿರ ಬಸ್ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ಚಾಲಕರನ್ನು ನಿಯೋಜಿಸಲಾಗುವುದು. ಸಮಸ್ಯೆ ಉಂಟಾಗದಂತೆ ಕ್ರಮ ತೆಗೆದುಕೊಳ್ಳಲಿದ್ದೇವೆ. ಗ್ರಾಮೀಣ ಭಾಗಗಳಲ್ಲಿ ಶಾಲಾ ಮಕ್ಕಳಿಗೆ ಬಸ್ ಸೇವೆಗಳಲ್ಲಿ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲು ಈ ಅಧಿವೇಶನದೊಳಗೆ ವಿಭಾಗವಾರು ಶಾಸಕರ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.