ವಿಜಯನಗರದಲ್ಲಿ ಬಿಸಿಯೂಟದಲ್ಲಿ ಹುಳು ಪತ್ತೆ; ಊಟದ ತಟ್ಟೆ ಸಮೇತ ವಾರ್ಡ್‌ ಸಭೆಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು

ವಿಜಯನಗರದಲ್ಲಿ ಬಿಸಿಯೂಟದಲ್ಲಿ ಹುಳು ಪತ್ತೆ; ಊಟದ ತಟ್ಟೆ ಸಮೇತ ವಾರ್ಡ್‌ ಸಭೆಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು

ವಿಜಯನಗರ: ಹರಪ್ಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಹುಳುಗಳು ಪತ್ತೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಾರ್ಡ್‌ ಸಭೆಗೆ ಮುತ್ತಿಗೆ ಹಾಕಿದ್ದಾರೆ.

ಬಿಸಿಯೂಟ ತಯಾರಿಸುವ ತೊಗರಿಏಳೆ , ಅಕ್ಕಿಯಲ್ಲಿ ಹುಳುಗಳಿ ಪತ್ತೆಯಾಗಿದ್ದು, ಇದನ್ನ ತಿನ್ನುವುದಾದರೂ ಹೇಗೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಕ್ಕಳು ಊಟದ ತಟ್ಟೆ ಸಮೇತ ವಾರ್ಡ್‌ ಸಭೆಗೆ ಮುತ್ತಿಗೆ ಹಾಕಿದ್ದಾರೆ. ತಿನ್ನುವ ಆಹಾರದಲ್ಲಿ ಹುಳುಗಳು ಪತ್ತೆಯಾಗಿದ್ದು, ಅದನ್ನು ತಿನ್ನುವುದಾದರೂ ಹೇಗೆ ಎಂದು ಅಧಿಕಾರಿಗಳಿಗೆ ಮಕ್ಕಳು ಪ್ರಶ್ನೆ ಮಾಡಿದ್ದಾರೆ.