ಭಾರತ್ ಜೋಡೋ ಯಾತ್ರೆಯಿಂದ ಫಿಸಿಕಲ್ ಫಿಟ್​ನೆಸ್ ಸಾಧ್ಯ!

ಭಾರತ್ ಜೋಡೋ ಯಾತ್ರೆಯಿಂದ ಫಿಸಿಕಲ್ ಫಿಟ್​ನೆಸ್ ಸಾಧ್ಯ!

ಬೆಂಗಳೂರು: ಭಾರತ್​ ಜೋಡೋ ಯಾತ್ರೆಯ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಒಂದು ಮಾಡುವ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನದ ಫಲವಾಗಿ ನಡೆಯುವುದರಿಂದ ಎಲ್ಲರಿಗೂ ಫಿಸಿಕಲ್ ಫಿಟ್​​ನೆಸ್​ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದ್ದಾರೆ.

ಮಾತನಾಡುತ್ತಾ ರಾಹುಲ್ ಗಾಂಧಿ ನಾನು ಶಿವನ ಭಕ್ತ ಎಂದು ಹೇಳಿದ್ದಾರೆ. ನಿಜವಾಗಿಯೂ ಶಿವನ ಮೇಲೆ ಭಕ್ತಿ ಇದ್ದರೆ ಒಳ್ಳೆಯದು. ರಾಹುಲ್ ಗಾಂಧಿಯ ಶಿವನ ಭಕ್ತಿ ನಾಟಕವಾಗದಿರಲಿ. ಇವರ ಅಮ್ಮ ಹಣೆಗೆ ಕುಂಕುಮ ಇಡುವುದಿಲ್ಲ. ನಮ್ಮ ಕಡೆ ಮದುವೆಯಲ್ಲಾದರೂ ಕುಂಕುಮ ಇಡುತ್ತಾರೆ. ಇವರು ಮದುವೆಯಲ್ಲಿ ಇಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಾಮಕಾವಸ್ತೆಗೆ ಚುನಾವಣೆ ಮಾಡಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಇದೆ. ಹೀಗಾಗಿ ಅವರು ರಬ್ಬರ್ ಸ್ಟ್ಯಾಂಪ್ ಅಧ್ಯಕ್ಷ ಆಗದಿರಲಿ. ಹೀಗಂತ ಖರ್ಗೆ, ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿದರೆ ಸೀತಾರಾಮ್ ಕೇಸರಿ, ನರಸಿಂಗ್ ರಾವ್ ಅವರಿಗೆ ಆದ ರೀತಿ ಆಗಲಿದೆ. ಇಳಿ ವಯಸ್ಸಿನಲ್ಲಿ ಅಪಮಾನ ಆಗಬಾರದು ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದರು.