50 ಕೋಟಿ ವಾಟ್ಸ್‌ ಆ್ಯಪ್‌ ಬಳಕೆದಾರರ ಮಾಹಿತಿ ಸೋರಿಕೆ: ವರದಿ

50 ಕೋಟಿ ವಾಟ್ಸ್‌ ಆ್ಯಪ್‌ ಬಳಕೆದಾರರ ಮಾಹಿತಿ ಸೋರಿಕೆ: ವರದಿ

ವಿಶ್ವದ ಅತಿ ದೊಡ್ಡ ದತ್ತಾಂಶ ಸೋರಿಕೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಜನಪ್ರಿಯ ಹ್ಯಾಕಿಂಗ್‌ ವೇದಿಕೆಯೊಂದು 50 ಕೋಟಿ ವಾಟ್ಸ್‌ ಆ್ಯಪ್‌ ಬಳಕೆದಾರರ ದೂರವಾಣಿ ಸಂಖ್ಯೆ ಮಾರಾಟಕ್ಕಿಟ್ಟಿದೆ ಎಂದು ಸೈಬರ್‌ನ್ಯೂಸ್‌ ವರದಿ ಮಾಡಿದೆ. 84 ದೇಶಗಳ ವಾಟ್ಸ್‌ ಆ್ಯಪ್‌ ಬಳಕೆದಾರರ ಖಾಸಗಿ ಮಾಹಿತಿ ಮಾರಾಟಕ್ಕೆ ಲಭ್ಯವಿದೆ. ಅಮೆರಿಕದ 3.2 ಕೋಟಿ ಬಳಕೆದಾರರ ಮಾಹಿತಿ ಲಭ್ಯ. ಈಜಿಪ್ಟ್‌, ಇಟಲಿ, ಫ್ರಾನ್ಸ್‌, ಯುಕೆ, ರಷ್ಯಾ ಮತ್ತು ಭಾರತದ ಬಳಕೆದಾರರ ಮಾಹಿತಿಯೂ ಲಭ್ಯವಿದೆ ಎಂದು ಜನಪ್ರಿಯ ಹ್ಯಾಕಿಂಗ್‌ ವೇದಿಕೆಯೊಂದು ಜಾಹೀರಾತು ನೀಡಿದೆ.