ಮಲ್ಯ ಪರ ವಾದ ಇಲ್ಲ; ಅವರ ಸಂಪರ್ಕವೇ ಇಲ್ಲ ಸು.ಕೋರ್ಟ್ ಮುಂದೆ ಅಲವತ್ತುಕೊಂಡ ವಕೀಲ

ನವದೆಹಲಿ: ಭಾರತದ ಬ್ಯಾಂಕುಗಳಿಗೆ ನಾಮ ಹಾಕಿ ವಿದೇಶಕ್ಕೆ ಓಡಿ ಹೋಗಿರುವ ಉದ್ಯಮಿ ವಿಜಯ್ ಮಲ್ಯ ಇರುವ ಸ್ಥಳದ ಬಗ್ಗೆ ಮಾಹಿತಿ ಇಲ್ಲ. ಅವರು ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ ಮಲ್ಯ ಪರವಾಗಿ ವಾದ ಮಂಡಿಸಲು ಅವರ ವಕೀಲರು ನಿರಾಕರಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾ. ಡಿ.ವೈ.ಚಂದ್ರಚೂಡ್ ಮತ್ತು ನ್ಯಾ. ಹಿಮಾ ಕೋಹ್ಲಿ ಅವರನ್ನು ಒಳಗೊಂಡ ನ್ಯಾಯಪೀಠದಿಂದ ವಿಜಯ್ ಮಲ್ಯ ಕುರಿತ ವಂಚನೆ ಪ್ರಕರಣದ ವಿಚಾರಣೆ ವೇಳೆ ಮಲ್ಯ ಪರ ನ್ಯಾಯವಾದಿ ಇ.ಸಿ.ಅಗರ್ವಾಲ್, “ನನಗೆ ಇರುವ ಮಾಹಿತಿ ಪ್ರಕಾರ ವಿಜಯ್ ಮಲ್ಯ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಆದರೆ ಅವರು ನನ್ನೊಂದಿಗೆ ಸದ್ಯ ಸಂಪರ್ಕದಲಿಲ್ಲ. ನನಗೆ ಅವರ ಈಮೇಲ್ ವಿಳಾಸ ಗೊತ್ತಿದೆ. ಆದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಭಾರತದಲ್ಲೂ ಎಲ್ಲೂ ಕಾಣಿಸಿಕೊಂಡಿಲ್ಲ. ಈಗಾಗಿ ತಮ್ಮನ್ನು ಈ ಪ್ರಕರಣದಲ್ಲಿ ವಕೀಲಿಕೆಯಿಂದ ಕೈಬಿಡಬೇಕು,’ ಎಂದು ಮನವಿ ಮಾಡಿಕೊಂಡಿದ್ದಾರೆ.
ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 10 ಸಾವಿರ ಕೋಟಿ ರೂ. ವಂಚಿಸಿದ್ದಾರೆ ಎಂಬ ಆರೋಪಕ್ಕೆ ಉದ್ಯಮಿ ವಿಜಯ ಮಲ್ಯ ಗುರಿಯಾಗಿದ್ದಾರೆ.