1ರಿಂದ 5ರವರೆಗೆ ಭೌತಿಕ ತರಗತಿ ಆರಂಭಿಸಲು ರುಪ್ಸ ಮನವಿ

ಬೆಂಗಳೂರು: 'ಕೋವಿಡ್ ಕಡಿಮೆ ಇರುವ ಪ್ರದೇಶಗಳಲ್ಲಿ 1ರಿಂದ 5ರವರೆಗೆ ಭೌತಿಕ ತರಗತಿ ನಡೆಸಲು ಸರ್ಕಾರ ಮುಂದಾಗಬೇಕು' ಎಂದು ನೋಂದಾ ಯಿತ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ (ರುಪ್ಸ) ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ರುಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಶಾಲೆಗಳ ಆರಂಭಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. 1ರಿಂದ 5ನೇ ತರಗತಿ ಗಳನ್ನೂ ಆರಂಭಿಸಬೇಕೆಂದು ಗ್ರಾಮೀಣ ಭಾಗದ ಮಕ್ಕಳ ಪೋಷಕರು ಒತ್ತಾಯಿ ಸುತ್ತಿದ್ದಾರೆ. ಹಾಗಾಗಿ, ವಾರದಲ್ಲಿ ಎರಡು ದಿನವಾದರೂ ತರಗತಿಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಬೇಕು ಎಂದರು.