ಪುನೀತ್ ನಮನ' ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅವಮಾನ; ಅಸಮಾಧಾನ ಹೊರಹಾಕಿದ ಫ್ಯಾನ್ಸ್

ಪುನೀತ್ ನಮನ' ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅವಮಾನ; ಅಸಮಾಧಾನ ಹೊರಹಾಕಿದ ಫ್ಯಾನ್ಸ್

ಬೆಂಗಳೂರು: ಮೊನ್ನೆಯಷ್ಟೇ ಪುನೀತ್ ರಾಜ್ ಕುಮಾರ್ ಗೌರವಾರ್ಥ ವಾಣಿಜ್ಯ ಮಂಡಳಿ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅವಮಾನವಾಗಿದೆಯೆಂದು ಅವರ ಫ್ಯಾನ್ಸ್ ಅಸಮಾಧಾನ ಹೊರಹಾಕಿದ್ದಾರೆ.

ಅರಮನೆ ಮೈದಾನಕ್ಕೆ ಎಂಟ್ರಿಯಾಗಬೇಕಾದರೆ ಎಲ್ಲಾ ಗಣ್ಯರಿಗೂ ಪಾಸ್ ನೀಡಲಾಗಿತ್ತು. ದರ್ಶನ್ ತಮ್ಮ ಸಂಗಡಿಗರ ಜೊತೆ ಎಂಟ್ರಿ ಗೇಟ್ ಗೆ ಬಂದಾಗ ಅಲ್ಲಿದ್ದ ಪೊಲೀಸರು ಪಾಸ್ ತೋರಿಸುವಂತೆ ಹೇಳಿದ್ದಾರೆ. ಇನ್ನು, ಜಾಗ ಇಲ್ಲ ಎಂದೂ ಅವಮಾನ ಮಾಡಿದರು ಎನ್ನಲಾಗಿದೆ. ಈ ವೇಳೆ ಸ್ವತಃ ದರ್ಶನ್ ತಾಳ್ಮೆಯಿಂದಲೇ ಮಾತನಾಡಿ ಒಳಗೆ ಹೋಗಿದ್ದಾರೆ.

ಆದರೆ ಒಬ್ಬ ಜನಪ್ರಿಯ ನಟ ಬಂದಾಗ ಈ ರೀತಿ ವರ್ತಿಸಿದ್ದು ಸರಿಯಲ್ಲ. ಈ ಅವ್ಯವಸ್ಥೆಗೆ ಕಾರಣ ಯಾರು ಎಂದು ದರ್ಶನ್ ಫ್ಯಾನ್ಸ್ ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.