ಹಿಂದಿ ಸಿನಿಮಾ ಆಫರ್ ತಿರಸ್ಕರಿಸಿ ಕನ್ನಡ ಪ್ರೇಮ ಮೆರೆದ ಝೈದ್ ಖಾನ್
ಬನಾರಸ್ ಸಿನಿಮಾದ ಹೀರೋ ಝೈದ್ ಖಾನ್ ಅವರಿಗೆ ಬಾಲಿವುಡ್ನಿಂದ ಬಿಗ್ ಆಫರ್ ಬಂದಿದೆ. ಹಿಂದಿಯ ಖ್ಯಾತ ನಿರ್ದೇಶಕರೋರ್ವರು ಒಂದೊಳ್ಳೆ ಕಥೆ ಹಿಡಿದು ಝೈದ್ ಅವರನ್ನು ಸಂಪರ್ಕಿಸಿದ್ದಾರೆ. ಈ ಅವಕಾಶವನ್ನು ಝೈದ್ ಸೇರಿದಂತೆ ಯಾವ ನಾಯಕನೂ ನಿರಾಕರಿಸಲು ಸಾಧ್ಯವಿರಲಿಲ್ಲ. ಆದರೆ, ಝೈದ್ ಅವರು ಈ ಆಫರ್ ಅನ್ನು ನಿರಾಕರಿಸಿದ್ದಾರೆ. ನಾನು ಯಾವ ಕಾರಣಕ್ಕೂ ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಲು ಸಿದ್ದನಿಲ್ಲ ಎಂಬ ಉತ್ತರ ನೀಡಿದ್ದು, ಕನ್ನಡ ಪ್ರೇಮ ಮೆರೆದಿದ್ದಾರೆ.