ವರ್ಜಿನಿಯಾದ ಯುಎಸ್ ವಾಲ್ಮಾರ್ಟ್ ಸ್ಟೋರ್ನಲ್ಲಿ ಶೂಟ್‌ಔಟ್‌

ವರ್ಜಿನಿಯಾದ ಯುಎಸ್ ವಾಲ್ಮಾರ್ಟ್ ಸ್ಟೋರ್ನಲ್ಲಿ ಶೂಟ್‌ಔಟ್‌

ಅಮೆರಿಕದ ವರ್ಜಿನಿಯಾದ ಚೆಸಾಪೀಕ್ ನಲ್ಲಿರುವ ವಾಲ್ಮಾರ್ಟ್ ಅಂಗಡಿಯೊಂದರಲ್ಲಿ ತಡರಾತ್ರಿ ನಡೆದ ಶೂಟ್‌ಔಟ್‌ನಲ್ಲಿ ಹಲವಾರು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಶೂಟರ್ ಅಂಗಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸ್ ಇಲಾಖೆಯ ವಕ್ತಾರ ಲಿಯೋ ಕೊಸಿನ್ಸ್ಕಿ ಸಂಕ್ಷಿಪ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದು ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ದೇಶದಲ್ಲಿ ನಡೆದ ಎರಡನೇ ಸಾಮೂಹಿಕ ಶೂಟೌಟ್ ಆಗಿದೆ.