ಸ್ಯಾಂಡಲ್‌ವುಡ್ ನಟನ ಫಾರಂಹೌಸ್ ನಲ್ಲಿ ಅಪ್ತಾಪ್ತೆ ಮೇಲೆ ಅತ್ಯಾಚಾರ: ಆರೋಪಿಗೆ 40 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮೈಸೂರು: ಇಲ್ಲಿನ ತಿ.ನರಸೀಪುರ ರಸ್ತೆಯ ಫಾರ್ಮ್ಹೌಸ್ನಲ್ಲಿರುವ ಖ್ಯಾತ ಸ್ಯಾಂಟಲ್‌ವುಡ್ ನಟರೊಬ್ಬರಿಗೆ ಸೇರಿದ್ದ ಫಾರಂಹೌಸ್ ನಲ್ಲಿ ಅಪ್ತಾಪ್ತೆ ಮೇಲೆ ಅತ್ಯಾಚಾರ ಪ್ರಕರಣ ಆರೋಪಿಗೆ 40 ವರ್ಷ ಕಠಿಣ ಶಿಕ್ಷೆ, ಹಾಗೂ ದಂಡವನ್ನು ವಿಧಿಸಿ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶವನ್ನು ಹೊರಡಿಸಿದೆ.
ಬಿಹಾರ ಮೂಲದ ನಾಜೀಮ್ ಶಿಕ್ಷೆಗೆ ಈಡಾದ ಆರೋಪಿಯಾಗಿದ್ದು, ನಾಜೀಮ್ ನಟರೊಬ್ಬರ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಫಾರ್ಮ್ ನಲ್ಲಿ ಅಪ್ರಾಪ್ತೆಗೆ 2021ರಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದ್ದು, ಯಾರಿಗಾದ್ರು ಈ ಬಗ್ಗೆ ಹೇಳಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ. ಬಾಲಕಿಯಿಂದ ಮಾಹಿತಿ ಪಡೆದುಕೊಂಡ ಆಕೆಯ ಹೆತ್ತವರು ನರಸೀಪುರ ಪೊಲೀಸ್ ಠಾಣೆಗೆ ಪಾಲಕರು ದೂರು ನೀಡದ್ದರು ತನಿಖೆ ನಡೆಸಿದ ಪೊಲೀಸರು ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಸಂಬಂಧಪಟ್ಟಂತೆ ಚಾರ್ಚ್ ಶೀಟು ಸಲ್ಲಿಸಿದ್ದರು. ಇದೇ ವೇಳೆ ವಿ ಚಾರಣೆ ನಡೆಸಿದ ನ್ಯಾಯಪೀಠ ಆರೋಪಿಗೆ 40 ವರ್ಷ ಕಠಿಣ ಶಿಕ್ಷೆ, 51 ಸಾವಿರ ರೂ. ದಂಡ ವಿಧಿಸಿ ಅಪ್ರಾಪ್ತೆ ಸರ್ಕಾರದಿಂದ 7 ಲಕ್ಷ ರೂ. ಪರಿಹಾರ ನೀಡಲು ಆದೇಶ ನೀಡಿದ್ದಾರೆ.