ಟ್ವಿಟ್ಟರ್'ಗೆ ಮರಳಿದ 'ಕಂಗನಾ ರಣಾವತ್ ', ಖುಷಿಯಾಗ್ತಿದೆ ಎಂದ ನಟಿಮಣಿ
ನವದೆಹಲಿ : ಅಮಾನತುಗೊಂಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಟ್ವಿಟರ್ ಖಾತೆಯನ್ನ ಮರುಸ್ಥಾಪಿಸಲಾಗಿದೆ. ಈ ಕುರಿತು ಕಂಗನಾ ಟ್ವೀಟ್ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಹಿಂದಿರುಗಿದ ನಂತ್ರ ತುಂಬಾ ಸಂತೋಷವಾಗಿದೆ ಎಂದು ನಟಿ ಬರೆದಿದ್ದಾರೆ.
ಅಂದ್ಹಾಗೆ, ಕಂಗನಾ ರಣಾವತ್ ಅವರ ವಿವಾದಾತ್ಮಕ ಹೇಳಿಕೆಗಳಿಗಾಗಿ ಅವರ ಟ್ವಿಟರ್ ಖಾತೆಯನ್ನ ಅಮಾನತುಗೊಳಿಸಲಾಗಿತ್ತು. ಎಲೋನ್ ಮಸ್ಕ್ ಟ್ವಿಟರ್ ವಹಿಸಿಕೊಂಡಾಗ, ನಟಿ ತನ್ನ ಖಾತೆಯನ್ನು ಮರುಸ್ಥಾಪಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು. ಅದ್ರಂತೆ, ಸಧ್ಯ ಮರುಸ್ಥಾಪಿಸಲಾಗಿದೆ.