ಜನಪ್ರಿಯ ವಿಶ್ವ ನಾಯಕರ ಪಟ್ಟಿಯಲ್ಲಿ ಮೋದಿಗೆ ಅಗ್ರಸ್ಥಾನ : ಪ್ರಧಾನಿಗೆ ಬಹುಪಾರಕ್ ಎಂದ ಶೇ.70ರಷ್ಟು ಜನ
ಡಿಜಿಟಲ್ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಅವ್ರು ಈ ಬಾರಿಯೂ ವಿಶ್ವದ ಅಗ್ರ ನಾಯಕನ ಸ್ಥಾನ ಉಳಿಸಿಕೊಂಡಿದ್ದಾರೆ. ಹೌದು, 'ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್(Global Leader Approval Rating Tracker)ನ ಇತ್ತೀಚಿನ ದತ್ತಾಂಶವು ಪ್ರಧಾನಿ ನರೇಂದ್ರ ಮೋದಿ ಅವರು ಶೇ.70 ರಷ್ಟು ಅನುಮೋದನೆ ರೇಟಿಂಗ್ ಹೊಂದಿದ್ದಾರೆ.
ನವೆಂಬರ್ 4 ರಂದು ನವೀಕರಿಸಲಾದ ದತ್ತಾಂಶದ ಪ್ರಕಾರ, ಪ್ರಧಾನಿ ಮೋದಿ ಅವರು ಪ್ರಸ್ತುತ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಯುಕೆ ಪ್ರಧಾನಿ ಬೋರಿಸ್ ಜಾನ್ಸನ್, ಕೆನಡಾದ ಜಸ್ಟಿನ್ ಟ್ರೂಡೊ, ಜರ್ಮನಿಯ ಏಂಜೆಲಾ ಮರ್ಕೆಲ್, ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಸೇರಿದಂತೆ ಹಲವಾರು ಪ್ರಭಾವಿ ವಿಶ್ವ ನಾಯಕರು ಸೇರಿದ್ದಾರೆ.
ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವ್ರು ಶೇಕಡಾ 66ರಷ್ಟು ರೇಟಿಂಗ್ ಪಡೆದಿದ್ರೆ, ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಪ್ರಸ್ತುತ ಶೇ.63 ರಷ್ಟು ರೇಟಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಜರ್ಮನಿಯ ಏಂಜೆಲಾ ಮರ್ಕೆಲ್ ಶೇಕಡಾ 54ರಷ್ಟು ರೇಟಿಂಗ್ ಪಡೆದಿದ್ದು, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಶೇಕಡಾ 47ರೊಂದಿಗೆ ಐದನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಯುಎಸ್ ಅಧ್ಯಕ್ಷ ಜೋ ಬಿಡೆನ್ ಪ್ರಸ್ತುತ ಶೇಕಡಾ 44ರಷ್ಟು ರೇಟಿಂಗ್ʼನೊಂದಿಗೆ ಆರನೇ ಸ್ಥಾನ ಹೊಂದಿದ್ದಾರೆ.
ಅಂದ್ಹಾಗೆ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೊ, ದಕ್ಷಿಣ ಕೊರಿಯಾ, ಸ್ಪೇನ್, ಯುನೈಟೆಡ್ ಕಿಂಗ್ ಡಮ್, ಕೆನಡಾ, ಬ್ರೆಜಿಲ್, ಆಸ್ಟ್ರೇಲಿಯಾ ಮತ್ತು ಯುಎಸ್ ಸೇರಿದಂತೆ 13 ದೇಶಗಳಲ್ಲಿನ ಉನ್ನತ ನಾಯಕರಿಗೆ ಅನುಮೋದನೆ ರೇಟಿಂಗ್ʼಗಳನ್ನು ಕಂಡುಹಿಡಿಯಲು ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಸಮೀಕ್ಷೆಯನ್ನ ನಡೆಸಲಾಗಿದೆ