ಪಂಚಮಸಾಲಿ ಸಮಾಜಕ್ಕೆ ಸಿಎಂ ಸ್ಥಾನ ತಪ್ಪಲು ಯಡಿಯೂರಪ್ಪ ಕಾರಣ

ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಆರೋಪ ಪಂಚಮಸಾಲಿ ಸಮುದಾಯದ ರಾಜಕಾರಣಿಗಳನ್ನು ಮುಖ್ಯಮಂತ್ರಿ ಹಾಗೂ ಮಂತ್ರಿಗಳನ್ನಾಗಿಸುವುದು ಸ್ವಾಮೀಜಿಗಳ ಕೆಲಸವಲ್ಲ. ಸಮಾಜದ ಮೀಸಲಾತಿ ಮತ್ತು ಸಂಘಟಣೆಗೋಸ್ಕರ ಹೋರಾಡುವುದೇ ನಮ್ಮ ಕೆಲಸ. ಮುಖ್ಯಮಂತ್ರಿ ಸ್ಥಾನ ಮಂಚಮಸಾಲಿ ಲಿಂಗಾಯತರಿಗೆ ಸಿಗಬೇಕೆಂಬುದು ಬಿಜೆಪಿ ಹೈ-ಕಮಾಂಡ್ ಆಸೆಯಾಗಿತ್ತು. ಆದರೆ ಯಡಿಯೂರಪ್ಪನವರ ಹಟದಿಂದ ನಮ್ಮ ಸಮಾಜಕ್ಕೆ ಸಿ.ಎಂ. ಸ್ಥಾನ ಕೈತಪ್ಪಿ ಹೋಗಿದೆ ಎಂದು ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಖಾಸಗಿ ಹೊಟೇಲ್ನಲ್ಲಿ ಪಂಚಮಸಾಲಿ ಲಿಂಗಾಯತ ಸಮಾಜದ ದುಂಡುಮೇಜಿನ ಪೂರ್ವಭಾವಿ ಸಭೆಯಲ್ಲಿಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಈ ರೀತಿ ಸ್ವಾಮೀಜಿ ಉತ್ತರಿಸಿದರು.