ಭಾರತ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ
ಶಿಗ್ಗಾಂವಿ- 11 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಿವಲಿಂಗೇಶ್ವರ ಶಿವಾಚಾರ್ಯರ ಅಭಿಮತ
ತಮ್ಮದೇ ಆದ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಭಾರತ ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀವಾಗಿದ್ದು ಸತತ 8 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ಕೆ ಸಾಮೂಹಿಕ ವಿವಾಹದ ಕಲ್ಯಾಣ ಕಾರ್ಯ ಸಾಕ್ಷಿಯಾಗಿದೆ ಎಂದು ಗಂಜೀಗಟ್ಟಿ ಮಠದ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಶಿಗ್ಗಾಂವಿ ತಾಲೂಕಿನ ಬನ್ನೂರ ಗ್ರಾಮದಲ್ಲಿ ಭಾರತ ಸೇವಾ ಸಂಸ್ಥೆಯ ವತಿಯಿಂದ ಬನ್ನೂರ ಗ್ರಾಮದ ಸಹಕಾರದೊಂದಿಗೆ ಹಮ್ಮಿಕೊಂಡ 11 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದ ನಂತರ ನಡೆದ ವೇಧಿಕೆ ಕಾರ್ಯಕ್ರಮದ ಸಾನಿದ್ಯವಹಿಸಿ ಮಾತನಾಡಿದ ಅವರು ಸಂಸ್ಥೆಯು ತನ್ನದೇ ವಿಶೇಷ ಮತ್ತು ವಿಶಿಷ್ಟ ಕಾರ್ಯಗಳನ್ನ ಹಮ್ಮಿಕೊಳ್ಳುವುದು ವಿಶೇಷವಾಗಿ ಬನ್ನೂರ ಗ್ರಾಮದ ಜನರ ಸಹಕಾರದಿಂದ ಒಗ್ಗಟ್ಟಿನಿಂದ ಎಲ್ಲ ಸಮುದಾಯಗಳ ಭಾಗವಹಸುವಿಕೆಯಿಂದ ಜೊತೆಗೆ ಶ್ರೀಕಾಂತ ದುಂಡಿಗೌಡ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ಸು ಕಾಣುತ್ತಿದೆ ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಸಾತಣ್ಣವರ ಮಾತನಾಡಿ ಕೋರೋನಾದಿಂದ ನಿಂತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ಸಿಕ್ಕಿದೆ, ಈ ಸಾಮೂಹಿಕ ವಿವಾಹಗಳು ಬಡವರ ಆರ್ಥಿಕ ಹೊರೆಯನ್ನು ನೀಗಿಸುವ ಕಲ್ಯಾಣ ಕಾರ್ಯಗಳಾಗಿವೆ ಅದನ್ನ ಭಾರತ ಸೇವಾ ಸಂಸ್ಥೆ ಮಾಡುತ್ತಿದೆ ಎಂದರು.
ಭಾರತ ಸೇವಾ ಸಂಸ್ಥೆಯ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ತಾಲೂಕಿನ ಪ್ರತಿ ಜಿಪಂ ಕ್ಷೇತ್ರದಲ್ಲಿ ಸಾಮೂಹಿಕ ವಿವಾಗಗಳಂತಹ ಕಲ್ಯಾಣ ಕಾರ್ಯಗಳನ್ನು ಮಾಡುವ ಇಂಗಿತ ವ್ಯಕ್ತಪಡಿಸಿ, ಭಾವೈಕ್ಯತೆಯನ್ನ ನೀಡಿ ತಾಲೂಕಾಗಿ ಶಿಗ್ಗಾವಿ ತಾಲೂಕು ಹೊರಹೊಮ್ಮಿದ್ದು ಎಲ್ಲರೂ ಏಕತೆಯಿಂದ ಹೋಗಬೇಕಿದ್ದು ಆ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳು ಪ್ರಮುಖ ಪಾತ್ರ ವಹಿಸಿವೆ, ಇಲ್ಲಿ ಎಲ್ಲ ಸಮುದಾಯಗಳು ಭಾಗವಹಿಸುವಿಕೆಯಿಂದ ಏಕತೆ ಎಂಬುದು ಬರುತ್ತದೆ, ಈ ಬನ್ನೂರ ಗ್ರಾಮದ ಜನರ ಸಹಕಾರದಿಂದ ಎಲ್ಲವೂ ನಡೆಯುತ್ತಿದೆ ನಾನು ಇಲ್ಲಿ ಹುಟ್ಟಿದ್ದು ಸಾರ್ಥಕವಾಯಿತು ಏಕೆಂದರೆ ಗ್ರಾಮದ ಜನರ ಪ್ರೀತಿ, ವಿವಿಧ ಶ್ರೀಗಳ ಆಶೀರ್ವಾದದ ಜೊತೆಗೆ ಇನ್ನೂ ಹೆಚ್ಚಿನ ಸೇವೆ ಮಾಡಲು ನನಗೆ ಸ್ಪೂರ್ತಿಯಾಗಿದೆ ಎಂದರು.
ಬಂಕಾಪೂರ ಅರಳೆಲೆಮಠದ ರೇವಣಶಿದ್ದೇಶ್ವರ ಶಿಚಾಚಾರ್ಯ ಮಹಾಸ್ವಾಮಿಗಳು, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಹಿರೇಮಣಕಟ್ಟಿ ವಿಶ್ವಾರಾದ್ಯ ಶ್ರೀಗಳು ಸಾನಿದ್ಯ ವಹಿಸಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಶಿವಾನಂದಸ್ವಾಮಿ ಹಿರೇಮಠ, ಮುಪ್ಪಯ್ಯಸ್ವಾಮಿ ಹಿರೇಮಠ, ಮಹಾನಿಂಗಯ್ಯ ಚಿಕ್ಕಮಠ, ಫಕ್ಕೀರಪ್ಪ ಕುಂದೂರ, ಕಾಳಪ್ಪ ಬಡಿಗೇರ, ತಮ್ಮನಗೌಡ್ರ ಪೋಲೀಸ್‍ಗೌಡ್ರ, ಅರ್ಜುನ ಹಂಚಿನಮನಿ, ಆಂಜನೇಯ ಗುಡಗೇರಿ, ಮಹಾದೇವಪ್ಪ ಸಿದ್ದಣ್ಣವರ, ಗುರುಸಿದ್ದಪ್ಪ ಪಾಟೀಲ, ಶೇಖಣ್ಣ ಜವಳಿ, ಶವಪ್ರಸಾದ ಸುರಗೀಮಠ, ಬಸವರಾಜ ಹೆಸರೂರ, ಮಹೇಶ ತಳವಾರ, ತಿಪ್ಪಣ್ಣ ಸಾತಣ್ಣವರ, ಉಮೇಶ ಗೌಳಿ, ಈರನಗೌಡ ಪಾಟೀಲ, ಕಿರಣ ಅವರಾದಿ, ಸುಭಾ ಚೌಹಾಣ್, ದೇವೇಂದ್ರಪ್ಪ ಬಡಿಗೇರ ಸೇರಿದಂತೆ ವಿವಿಧ ಸಮುದಾಯದ ಅದ್ಯಕ್ಷರುಗಳು, ಮುಖಂಡರು, ಗ್ರಾಮದ ಮುಖಂಡರು, ಭಾರತ ಸೇವಾ ಸಂಸ್ಥೆಯ ಪದಾಧಿಕಾರಿಗಳು ಇದ್ದರು ಮುಖಂಡರಾದ ಟಾಕನಗೌಡ್ರ ಪಾಟೀಲ ಸ್ವಾಗತಿಸಿದರು, ನವೀನ ಸಾಸನೂರ ನಿರೂಪಿಸಿದರು.