ಬೆಳಗಾವಿ ರೈತರಿಗೆ ಅನ್ಯಾಯ
ಮಜಗಾವ ಗ್ರಾಮದಲ್ಲಿರುವ ಸುಮಾರು 80 ಎಕರೆ ಗೋಮಾಳ ಜಾಗವನ್ನು ರೈತರಿಗೆ ಮೋಸ ಮಾಡಿ ಆಕ್ರಮವಾಗಿ ಖರೀದಿ ಮಾಡಲಾಗಿದೆ. ಕೂಡಲೇ ಜಮೀನು ಖರೀದಿಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ಅನ್ನದಾತರು ಇಂದು ಗ್ರಾಮದಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಬೆಳಗಾವಿಯ ಮಜಗಾವ ಗ್ರಾಮದಲ್ಲಿ ಇಂದು ನೂರಾರು ಸಂಖ್ಯೆ ಯಲ್ಲಿ ರೈತರು ಜಮಾವಣೆ ಗೊಂಡಿದ್ದರು. ಕೆಲ ರಾಜಕೀಯ ಪುಡಾರಿಗಳ ಪ್ರೆರೇಪಣೆಯಿಂದ ನೇಗಿಲು ಹೊತ್ತು ದುಡಿಯುವ ಅನ್ನದಾತರಿಗೆ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಇಂದು ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು ತಮಗಾಗಿರುವ ಅನ್ಯಾಯದ ಕುರಿತು ಹೋರಾಟ ನಡೆಸಲು ಪೂರ್ವ ಭಾವಿ ಸಭೆ ನಡೆಸಿದರು. ಇತ್ತೀಚಿಗೆ ಅಷ್ಟೇ ಬೆಳಗಾವಿ ಬಂದಿರುವ ನೂತನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನೇಗಿಲ ಯೋಗಿಗೆ ನ್ಯಾಯ ಒದಗಿಸಬೇಕಾಗಿದೆ.