ಕೇಂದ್ರ ಸರ್ಕಾರ ಹೊಸ ಯೋಜನೆ ; 'ಆನ್ಲೈನ್ ವಂಚನೆ'ಗೆ ಕಡಿವಾಣ, ನಿಮ್ಮ ಹಣ ಈಗ ಮತ್ತಷ್ಟು ಸೇಫ್

ನವದೆಹಲಿ : ಆನ್ಲೈನ್ ಶಾಪಿಂಗ್ ಸೌಲಭ್ಯದಿಂದ ಅನೇಕ ವಿಷಯಗಳು ಸುಲಭವಾಗಿದೆ. ಆದಾಗ್ಯೂ, ವಂಚನೆ ಬಗ್ಗೆ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರವು ಆನ್ಲೈನ್ ಪ್ಲಾಟ್ಫಾರ್ಮ್ಗಳ ನಿಯಮಗಳನ್ನ ನಿರಂತರವಾಗಿ ಬದಲಾಯಿಸುತ್ತಿದೆ. ಗ್ರಾಹಕರು ವಂಚನೆ ಅಥವಾ ಡೇಟಾ ಕದಿಯುವ ಪ್ಲಾಟ್ಫಾರ್ಮ್'ಗಳಿಂದ ತಮ್ಮನ್ನ ಹೇಗೆ ರಕ್ಷಿಸಿಕೊಳ್ಳಬಹುದು ಎಂಬ ಮಾಹಿತಿಯನ್ನ ಕೇಂದ್ರ ಸರ್ಕಾರ ನೀಡಿದೆ.
ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಲಿಖಿತ ಉತ್ತರದಲ್ಲಿ ಕೇಂದ್ರ ಸಚಿವರು, ಭಾರತೀಯ ಮಾನದಂಡಗಳ ಬ್ಯೂರೋ 'ಆನ್ಲೈನ್ ಗ್ರಾಹಕ ವಿಮರ್ಶೆ, ತತ್ವ ಮತ್ತು ಚೌಕಟ್ಟು' ಕುರಿತು ಅಧಿಸೂಚನೆಯನ್ನ ಹೊರಡಿಸಿದೆ ಎಂದು ಹೇಳಿದರು. ಅಂತೆಯೇ, ಇ-ಕಾಮರ್ಸ್ನಲ್ಲಿನ ನಕಲಿ ಮತ್ತು ತಪ್ಪುದಾರಿಗೆಳೆಯುವ ವಿಮರ್ಶೆಗಳಿಂದ ಗ್ರಾಹಕರು ತಮ್ಮ ಹಿತಾಸಕ್ತಿಗಳನ್ನ ರಕ್ಷಿಸಿಕೊಳ್ಳಲು ಸಹಾಯ ಮಾಡಲು ಕೆಲವು ಸಲಹೆಗಳನ್ನ ನೀಡಲಾಗಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಹೊರಡಿಸಿದ ಈ ಅಧಿಸೂಚನೆಯು ಎಲ್ಲಾ ಆನ್ಲೈನ್ ಪ್ಲಾಟ್ಫಾರ್ಮ್ಗಳಿಗೆ ಅನ್ವಯಿಸುತ್ತದೆ.
ಬಿಐಎಸ್ ಅಧಿಸೂಚನೆಯ ಪ್ರಕಾರ, ಯಾರೂ ಪ್ಲಾಟ್ಫಾರ್ಮ್ನಲ್ಲಿ ನಕಲಿ ವಿಮರ್ಶೆಗಳನ್ನು ಪೋಸ್ಟ್ ಮಾಡಬಾರದು. ಕೇಂದ್ರ ಸರ್ಕಾರ ಹೊರಡಿಸಿರುವ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ವೇದಿಕೆ ಈ ರೀತಿ ಮಾಡಿದ್ರೆ, ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಸರ್ಕಾರ ಹೊರಡಿಸಿದ ಈ ಅಧಿಸೂಚನೆಯು ಬಳಕೆದಾರರಿಗೆ ಗೌಪ್ಯತೆ, ಭದ್ರತೆ, ಪಾರದರ್ಶಕತೆ, ಹೊಣೆಗಾರಿಕೆ ಇತ್ಯಾದಿ ಹಕ್ಕುಗಳನ್ನು ಒದಗಿಸುತ್ತದೆ.