ಅಣ್ಣನ ಹತ್ಯೆ ಮಾಡಲು ಮುಂದಾದವನಿಂದ “ವಿನಯ ಕುಲಕರ್ಣಿ ಹೆಸರು ದುರ್ಬಳಕೆ”
ಹುಬ್ಬಳ್ಳಿ: ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯಲ್ಲಿ ಇರದೇ ಇದ್ದರೂ ಅವರ ಅಭಿಮಾನಿಯಂತೆ ಪೋಸ್ ಕೊಟ್ಟ ಕೆಲವರು, ತಮ್ಮ ವಯಕ್ತಿಕ ಲಾಭಕ್ಕಾಗಿ ವಿನಯ ಕುಲಕರ್ಣಿಯವರ ಹೆಸರು ಕೆಡಿಸುವ ಯತ್ನ ನಡೆಸುತ್ತಿರುವುದು ಖೇದಕರ ಸಂಗತಿ
ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತನೆಂದು ಬಿಂಬಿಸಿಕೊಂಡ ವ್ಯಕ್ತಿಯೋರ್ವ ತನ್ನ ಒಡಹುಟ್ಟಿದ ಅಣ್ಣನಿಗೆ ಹಲವು ದಿನಗಳಿಂದ ಆಸ್ತಿಯ ವಿಚಾರಕ್ಕೇ ಯುವಕರ ಗುಂಪು ಕರೆದುಕೊಂಡು ಬಂದು ಕಿರುಕುಳ ಕೊಟ್ಟಿದ್ದಲ್ಲದೇ, ಅಣ್ಣನ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಆತನ ಕೊಲೆಗೆ ಯತ್ನಿಸಿದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ವಿನಯ ಕುಲಕರ್ಣಿ ಅವರ ಜೊತೆಗಿರುವ ಪೋಟೊಗಳಿಂದಲೇ ಅವರ ಆಪ್ತ ಎಂದು ಗುರುತಿಸಿಕೊಂಡಿರುವ ಈತ ದಾದಾಗಿರಿ ಪ್ರವೃತ್ತಿ ಹೊಂದಿದ ಆಸಾಮಿ, ಆಸ್ತಿಯ ವಿಚಾರಕ್ಕೇ ಸಂಬಂದಿಸಿದಂತೆ ಗಾಮನಗಟ್ಟಿಯಲ್ಲಿನ ತನ್ನ ಸ್ವತಃ ಅಣ್ಣನಾದ ಕಲ್ಲನಗೌಡನ ಜೊತೆ ಗುರುವಾರ ರಾತ್ರಿ ಜಗಳ ತೆಗೆದು ಕಣ್ಣಿಗೆ ಕಾರದ ಪುಡಿ ಎರಚಿ ಚಾಕು ಇರಿದು ಪರಾರಿಯಾಗಿದ್ದ.
ಗಂಭೀರವಾಗಿ ಗಾಯಗೊಂಡಿದ್ದ ಬಸವನಗೌಡನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಘಟನೆಯನ್ನು ಕಣ್ಣಾರೆ ಕಂಡ ಕಲ್ಲನಗೌಡನ ಪತ್ನಿ ಕಾವೇರಿ ಮೈದುನ ಬಸವನಗೌಡ ಕೊಟ್ಟ ಕಿರುಕುಳದ ಬಗ್ಗೆ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾಳೆ.
ಕಳೆದ ಕೆಲವು ದಿನಗಳಿಂದ ವಿನಯ ಕುಲಕರ್ಣಿ ಹೆಸರನ್ನು ಹೇಳಿ ನಮಗೆ ಬಸವನಗೌಡ ಜೀವ ಬೆದರಿಕೆ ಹಾಕಿಕೊಂಡು ಬರುತ್ತಿದ್ದ. ಇದರಿಂದ ಹಲವು ದಿನಗಳ ಕಾಲ ಊರು ಬಿಡುವಂತೆ ಮಾಡಿದ್ದರು ಎಂದು ಬಸವನಗೌಡನ ಕಿರುಕುಳವನ್ನು ಆತನ ತಮ್ಮ ಶಂಕರಗೌಡ ಹೇಳಿದ್ದಾನೆ.