ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಗೊಕುಲ ರಸ್ತೆಯಲ್ಲಿರುವ ಗ್ರೀನ್ ಗಾರ್ಡನ್ ಕಾಲೋನಿಯ ಶ್ರೀ ಕರೆಯಮ್ಮ ದೇವಸ್ಥಾನದ ಅರ್ಚಕಾದ ಮಂಜುನಾಥ ಹೆಬ್ಬಾರ ಅವರ ಮೇಲೆ ಸಂದೀಪ ಜಡಿ ಹಾಗೂ ರೇಶ್ಮಾ ಜಡಿ ಎಂಬುವರು ಹಲ್ಲೆ ಮಾಡಿದ್ದಾರೆ. ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಹಿನ್ನಲೆಯಲ್ಲಿ ದೇವಸ್ಥಾನ ದ ಮುಂದೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ದೇವಸ್ಥಾನ ಅರ್ಚಕರು, ಗಾರ್ಡನಲ್ಲಿರುವ ಕರಕಿಯನ್ನು ತುಳಿಯಬೇಡಿ ಅದನ್ನು ದೇವರಿಗೆ ಬಳಸುತ್ತೇವೆ ಎಂದು ಹೇಳಿದ್ದಕ್ಕೆ ನವೆಂಬರ್ 2 ರಂದು ದೇವಸ್ಥಾನಕ್ಕೆ ಬಂದು ಜಡಿ ಕುಟುಂಬದವರು ಅರ್ಚಕರ ಜೊತೆ ಜಗಳ ತೆಗೆದಿದ್ದಾರೆ. ಜಡಿ ಕುಟುಂಬದವರು ಸ್ಥಳಿಯ ಕಾಪೆರ್Çೀರೆಟ್ ರ ಅವರ ಕುಮ್ಮಕ್ಕಿನಿಂದ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.