ರಾಮನಗೌಡ್ರ ಅವರಿಗೆ ಅದ್ದೂರಿ ಸ್ವಾಗತ
ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆ ಗುರುತಿಸಿ ಧಾರವಾಡದ ವೈದ್ಯ ಎಸ್.ಆರ್. ರಾಮನಗೌಡ ಅವರಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಪಡೆದು ವಾಪಸ್ಸಾದ ವೈದ್ಯನಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಧಾರವಾಡದ ಜನರು ವೈದ್ಯರ ಮನೆತನಕ ಮೆರವಣಿಗೆ ಮೂಲಕ ಅವರನ್ನು ಕರೆತಂದು ಸಿಹಿ ತಿನಿಸಿ ಹುಮಾಲೆ ಹಾಕಿ ಸ್ವಾಗತಿಸಿದರು.