ಕುಂದಗೋಳದ ಲಿಂ.‌ಬಸವಣ್ಣಜ್ಜನವರ ಕಲ್ಯಾಣ ಪುರ ಮಠದ ೫೦ ನೇ ಸುವರ್ಣ ಮಹೋತ್ಸವ,

ಕುಂದಗೋಳದ ಲಿಂ.‌ಬಸವಣ್ಣಜ್ಜನವರ ಕಲ್ಯಾಣ ಪುರ ಮಠದ ೫೦ ನೇ ಸುವರ್ಣ ಮಹೋತ್ಸವ,

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕುಂದಗೋಳದ ಲಿಂ.‌ಬಸವಣ್ಣಜ್ಜನವರ ಕಲ್ಯಾಣ ಪುರ ಮಠದ ೫೦ ನೇ ಸುವರ್ಣ ಮಹೋತ್ಸವ, ಕಲ್ಯಾಣಪುರ ಮಠದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಅಂಗವಾಗಿ  ಜ. ೧ ರಿಂದ ಫೆ. ೧ ರ ವರೆಗೆ ವಿವಿಧ ಧಾರ್ಮಿಕ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಬಸವಣ್ಣಜ್ಜವರು ಹೇಳಿದರು. 

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಗೋಳದ ಲಕ್ಷ್ಮೇಶ್ವರ ಶಿರೂರ ಕಲ್ಲನಗೌಡರ ಬಸವಣ್ಣಜ್ಜರ ವೇದಿಕೆಯಲ್ಲಿ ಜ. ೧ ರಂದು ಸಂಜೆ ೬ ಗಂಟೆಗೆ ಬಸವ ಪುರಾಣ ಆರಂಭವಾಗಲಿದೆ. ಇದು ಒಂದು ತಿಂಗಳ ನಿತ್ಯ ನಡೆಯಲಿದೆ. ಜ. ೨ ಸಂಜೆ ೬ ಗಂಟೆಗೆ ಮಠದಿಂದ ತುಲಾಭಾರ ಸಮಾರಂಭ, ಜ. ೫ ರಂದು ಯೋಗ ಶಿಬಿರ ಬೆಳಿಗ್ಗೆ ೬ ರಿಂದ ೭ ಗಂಟೆ ವರೆಗೆ ನಡೆಯಲಿದೆ ಎಂದರು.

ಜ. ೧೨ ರಂದು ಸಂಜೆ ೬ ಗಂಟೆಗೆ ಸ್ವಾಮಿ ವಿವೇಕಾನಂದ ಅವರ  ಜನ್ಮದಿನದ ಅಂಗವಾಗಿ ಯುವಜನೋತ್ಸವ ನಡೆಯಲಿದೆ. ಜ. ೧೯ ರಂದು ಲಿ. ಬಸವಣ್ಣಜ್ಜನವರ ಜೀವನಾಧಾರಿತ ಕಿರುಚಿತ್ರ ಬಿಡುಗಡೆಯಾಗಲಿದೆ. ಜ. ೨೬ ರಂದು ೧೦೦೮ ಜಂಗಮ ವಟುಗಳಿಗೆ ಅಯ್ಯಾಚಾರ ಮತ್ತು ಲಿಂಗ ದೀಕ್ಷೆ, ಅಂದು ಸಂಜೆ ೬ ಗಂಟೆಗೆ ಕೃಷಿ ಸಮ್ಮೇಳನ ನಡೆಯಲಿದೆ. ಜ. ೨೭ ರಂದು ನೂರು ಉಚಿತ ಸಾಮೂಹಿಕ ವಿವಾಹ, ಸಂಜೆ ೬ ಗಂಟೆಗೆ ಸೈಕಿಕೋತ್ಸವ ನಡೆಯಲಿದೆ. ಜ. ೨೮ ರಂದು ಸಂಜೆ ೬ ಗಂಟೆಗೆ ಮಹಾದ್ವಾರ ಉದ್ಘಾಟನೆ ಹಾಗೂ ಮಹಿಳಾ ಸಮಾವೇಶ ಹಾಗೂ ಲಿ. ಬಸವಣ್ಣಜ್ಜನವರ ಮೂರ್ತಿ ತುಲಾಭಾರ ನಡೆಯಲಿದೆ. ಜ. ೩೦ ರಂದು ನೂತನ ಮಠದ ಲೋಕಾರ್ಪಣೆ ಸಂಜೆ ೬ ಗಂಟೆಗೆ ನಡೆಯಲಿದೆ. ಜ. ೩೧ ರಂದು ಶೂನ್ಯ ಸಿಂಹಾಸನಾರೋಹಣ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ. ಸಂಜೆ  ೬ ಗಂಟೆಗೆ ರಥೋತ್ಸವ ನಡೆಯಲಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ರಾಚೋಟೇಶ್ವರ ದೇವರು, ಗದಗಯ್ಯ ದೇವರು, ಸರ್ಪಭೂಷಣ ದೇವರು, ಶಂಕರ ಲಿಂಗ ದೇವರು ಇದ್ದರು.