24, ಪ್ರಶಸ್ತಿ ಪಡೆದ ವಿದ್ಯಾರಣ್ಯ ಕಾಲೇಜು ವಿದ್ಯಾರ್ಥಿ ಕಾರ್ತಿಕ
ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭವನ್ನು ಧಾರವಾಡ ವಿದ್ಯಾರಣ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ನಡೆಸಿದ್ರು. ಇನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ. ಎಸ್ ಆರ್ ರಾಮನಗೌಡ್ರ, ಕೆಎ ಬೋಡ್೯ ಸಂಸ್ಥೆ ಅಧ್ಯಕ್ಷ ಡಾ.ಅಶೋಕ ಚಚ್ಚಡಿ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು. ವಿದ್ಯಾರಣ್ಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮತ್ತು ಕ್ರೀಡೆಗಳಲ್ಲಿ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಶಸ್ತಿ ಭಾಜನರಾದರು. ಇನ್ನು ವಿದ್ಯಾರಣ್ಯ ಕಾಲೇಜು ಬೆಸ್ಟ್ ವಿದ್ಯಾರ್ಥಿ ಕಾರ್ತಿಕ ಸುಮಾರು 24 ಪ್ರಶಸ್ತಿ ಪಡೆದುಕೋಳ್ಳುವ ಮೂಲಕ ವಿದ್ಯಾರಣ್ಯ ಕಾಲೇಜು ಮತ್ತಷ್ಟು ಹೆಚ್ಚಿಸಿದ್ರು. ಅಲ್ಲದೆ ತಮ್ನ ಶಿಕ್ಷಕರ ಮೆಚ್ಚುಗೆ ಪಡೆದುಕೊಂಡರು. ಅನಂತರ ಮಾತನಾಡಿದ ವಿದ್ಯಾರ್ಥಿ ಕಾರ್ತಿಕ ನಂಗೇ ಪ್ರಶಸ್ತಿ ದೊರೆತಿದ್ದು ಸಂತಸವಾಗಿದೆ. ನಂಗೇ ಇಷ್ಟು ಪ್ರಶಸ್ತಿ ಲಭಿಸಲಿಕ್ಕೆ ನನ್ನ ಪಾಲಕರು, ಮತ್ತು ವಿದ್ಯಾರಣ್ಯ ಕಾಲೇಜು ಶಿಕ್ಷಕರ ಪ್ರೋತ್ಸಾಹವೇ ಕಾರಣವೆಂದ ಹರ್ಷ ವ್ಯಕ್ತಪಡಿಸಿದನು. ಇದೇ ತರಾ ಮುಂದೆ ಕೂಡಾ ಓದುವ ಮೂಲಕ ಸಾಧನೆ ಮಾಡ್ತನಿ ಎನ್ನುವ ವಿಶ್ವಾಸ ಮೂಡಿಸಿದ್ರು. ವಿದ್ಯಾರಣ್ಯ ಶಿಕ್ಷಕರು ಸತೀಶ್ ಅವರು ಮಾತನಾಡಿ ಪ್ರತಿವರ್ಷದಂತೆ ಈ ವರ್ಷವು ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ವಿದ್ಯಾಭ್ಯಾಸದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿದ್ದವೆ. ಅಲ್ಲದೇ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಸಂತಸ ವ್ಯಕ್ತಪಡಿಸಿದರು...