ರಾಹುಲ್ ಗಾಂಧಿ ಈಗ ಥೇಟ್ ಸದ್ದಾಂ ಹುಸೇನ್ ತರ ಕಾಣುತ್ತಾರೆ: ಅಸ್ಸಾಂ ಸಿಎಂ ವ್ಯಂಗ್ಯ

ರಾಹುಲ್ ಗಾಂಧಿ ಅವರು ಈಗ ಡೇಟ್ ಇರಾನ್ ಸರ್ವಾಧಿಕಾರಿ ಸದ್ದಾಂ ಹುಸೇನ್‌ಗೆ ಅವರಂತೆ ಕಾಣುತ್ತಿದ್ದಾರೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ವ್ಯಂಗ್ಯವಾಡಿದ್ದಾರೆ. ಅಹಮದಾಬಾದ್‌ನಲ್ಲಿ ಬಿಜೆಪಿಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಸೋಲಿನ ಭಯದಿಂದಾಗಿ ಚುನಾವಣೆಗೂ ಮುನ್ನ ಗುಜರಾತ್‌ಗೆ ಭೇಟಿ ನೀಡಿಲ್ಲ. ರಾಹುಲ್ ಭಾರತ್ ಜೋಡೋ ಯಾತ್ರೆಗೆ ಆಗಮಿಸಲು ಬಾಲಿವುಡ್ ತಾರೆಯರಿಗೆ ಕಾಂಗ್ರೆಸ್ ಹಣ ನೀಡಿದೆ ಎಂದು ಆರೋಪಿಸಿದ್ದಾರೆ.