ಗಂಗಾವತಿ: ಕುತೂಹಲ ಕೆರಳಿಸಿದ ಸಚಿವ ಬಿ.ಶ್ರೀರಾಮುಲು, ಶಾಸಕ ಮುನವಳ್ಳಿ ಭೇಟಿ

ಗಂಗಾವತಿ: ತಾಲೂಕಿನ ಕೃಷ್ಣಾಪೂರ ಡಗ್ಗಿ ಬಳಿ ಸಾರಿಗೆ ಸಚಿವ ಬಿ. ಶ್ರೀ ರಾಮುಲು, ಬಳ್ಳಾರಿ ಶಾಸಕ ಜಿ.ಸೋಮಶೇಖರ್ ರೆಡ್ಡಿಯವರನ್ನು ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಕೆಆರ್ ಪಿಪಿ ನೂತನ ಪಕ್ಷ ಸ್ಥಾಪಿಸಿ ಗಂಗಾವತಿಯಿಂದ ವಿಧಾನಸಭೆಗೆ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದಾಗಿನಿಂದ ಕೊಪ್ಪಳ ಜಿಲ್ಲೆಯಲ್ಲಿ ಚುನಾವಣೆ ತುರುಸಾಗುವ ಸಾಧ್ಯತೆ ಇದ್ದು, ಗಾಲಿ ರೆಡ್ಡಿ ಬಿಜೆಪಿ,ಕಾಂಗ್ರೆಸ್ ಸೇರಿ ಯಾರಿಗೆ ಎದುರಾಳಿಯಾಗಲಿದ್ದಾರೆಂಬ ವಿಷಯ ಕೊಪ್ಪಳ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ.
ಶಾಸಕ ಪರಣ್ಣ ಮುನವಳ್ಳಿ ಈಗಾಗಲೇ ಪಕ್ಷದ ಹೈಕಮಾಂಡ ಹಾಗೂ ಆರ್ ಎಸ್ ಎಸ್ ಮುಖಂಡರ ಗಮನಕ್ಕೆ ತಂದು ಚುನಾವಣಾ ಕಾರ್ಯತಂತ್ರದ ಕುರಿತು ಸಿದ್ದತೆ ನಡೆಸುತ್ತಿರುವ ಸಂದರ್ಭದಲ್ಲಿ ಸಾರಿಗೆ ಸಚಿವ ಬಿ.ಶ್ರೀ ರಾಮುಲು ಬಳ್ಳಾರಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ತಾಲೂಕಿನ ಪಂಪಾ ಸರೋವರ, ಅಂಜನಾದ್ರಿಗೆ ತೆರಳುವ ಮಾರ್ಗಮಧ್ಯದಲ್ಲಿ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಹಾಗೂ ಎಜಿಪಿ ಎಚ್.ಸಿ.ಯಾದವ್, ಕೆಲೋಜಿ ಸಂತೋಷ, ಜೋಗದ ನಾರಾಯಣಪ್ಪ, ಕರುಣಾಕರ್, ವಿಜಯ ಸಿದ್ದಾಪುರ ಇದ್ದರು.