ಮದ್ಯ ನೀತಿʼ ಪರಿಷ್ಕರಿಸಿದ ʻಏರ್ ಇಂಡಿಯಾʼ: ಪ್ರಯಾಣಿಕರಿಗೆ ಹೆಚ್ಚೆಚ್ಚು ʻಆಲ್ಕೋಹಾಲ್ʼ ನೀಡದಂತೆ ಸೂಚನೆ

ನವದೆಹಲಿ: ವಿಮಾನದಲ್ಲಿ ಕುಡಿದು ಪ್ರಯಾಣಿಕರು ಅನುಚಿತವಾಗಿ ವರ್ತಿಸುವ ಘಟನೆಗಳ ನಡುವೆ ಏರ್ ಇಂಡಿಯಾ ತನ್ನ ವಿಮಾನದೊಳಗಿನ ಮದ್ಯ ನೀತಿಯನ್ನು ಪರಿಷ್ಕರಿಸಿದೆ.
ಏರ್ ಇಂಡಿಯಾ ತನ್ನ ವಿಮಾನದಲ್ಲಿನ ಆಲ್ಕೋಹಾಲ್ ಸೇವಾ ನೀತಿಯನ್ನು ಮಾರ್ಪಡಿಸಿದೆ.
ಎರಡು ಅಂತರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರು ಅಶಿಸ್ತಿನ ವರ್ತನೆಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಲ್ಲಿ DGCA ನಿಂದ ಟಾಟಾ ಸಮೂಹದ ಒಡೆತನದ ಏರ್‌ಲೈನ್‌ಗೆ ದಂಡ ವಿಧಿಸಲಾಗಿದೆ.
ಜನವರಿ 19 ರಂದು ಹೊರಡಿಸಲಾದ ಪರಿಷ್ಕೃತ ನೀತಿಯ ಪ್ರಕಾರ, ಸಿಬ್ಬಂದಿಯಿಂದ ಸೇವೆ ಸಲ್ಲಿಸದ ಹೊರತು ಅವರು ವಿಮಾನದಲ್ಲಿ ಆಲ್ಕೋಹಾಲ್ ಸೇವಿಸಲು ಅನುಮತಿಸುವುದಿಲ್ಲ. ಸ್ವಂತ ಮದ್ಯ ಸೇವಿಸುವ ಪ್ರಯಾಣಿಕರನ್ನು ಸಿಬ್ಬಂದಿ ನಿಗಾ ವಹಿಸುತ್ತಾರೆ. ಅಗತ್ಯವಿದ್ದಾಗ ಮದ್ಯ ನೀಡಲು ನಿರಾಕರಿಸುವ ಚಾಕಚಕ್ಯತೆಯನ್ನು ಸಿಬ್ಬಂದಿಗೆ ತಿಳಿಸಲಾಗಿದೆ. ಮದ್ಯವನ್ನು ಪೂರೈಸಲು ನಿರಾಕರಿಸಿದ ಸಂದರ್ಭದಲ್ಲಿ ಏರ್‌ಲೈನ್ ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.
ಅದೇನೆಂದರೆ, ಕ್ಯಾಬಿನ್ ಸಿಬ್ಬಂದಿ ಸಭ್ಯರಾಗಿರಬೇಕು ಮತ್ತು ಮೌಲ್ಯ ನಿರ್ಣಯಗಳನ್ನು ತಪ್ಪಿಸಬೇಕು ಮತ್ತು ಅತಿಥಿಗೆ ನೀವು ಇನ್ನು ಮುಂದೆ ಮದ್ಯವನ್ನು ನೀಡುವುದಿಲ್ಲ ಎಂದು ನಯವಾಗಿ ತಿಳಿಸಲು ಚಾತುರ್ಯವನ್ನು ಬಳಸಬೇಕು.
ನೀತಿಯ ಪ್ರಕಾರ, 'ಅತಿಥಿಯನ್ನು(ಪ್ರಯಾಣಿಕ) 'ಕುಡುಕ' ಎಂದು ಕರೆಯಬೇಡಿ. ಅದು ಅವರ ನಡವಳಿಕೆ ಸ್ವೀಕಾರಾರ್ಹವಲ್ಲ ಎಂದು ಅವರನ್ನು ನಯವಾಗಿ ಎಚ್ಚರಿಸಿ. ಪ್ರಯಾಣಿಕ ಹೆಚ್ಚುವರಿಯಾಗಿ ಮದ್ಯವನ್ನು ಸೇವಿಸಲು ಕೇಳಿದರೆ, ವಿಮಾನ ಸಿಬ್ಬಂದಿ ತಮ್ಮ ಜಾಣ್ಮೆಯಿಂದ ಅವರಿಗೆ ಮದ್ಯವನ್ನು ನೀಡಲ ನಿರಾಕರಿಬೇಕು' ಎಂದು ತಿಳಿಸಲಾಗಿದೆ