ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಬಗ್ಗೆ ಸುದೀಪ್ ಹೇಳಿಕೆ!

ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಚಪ್ಪಲಿ ಎಸೆಯುವಂತ ಕೃತ್ಯಗಳಿಗೆ ಖಂಡಿತಾ ದರ್ಶನ್ ಅರ್ಹರಲ್ಲ. ಈ ಘಟನೆ ನನ್ನ ಮನಸ್ಸನ್ನು ಘಾಸಿಗೊಳಿಸಿದೆ. ದರ್ಶನ್ ವಿಚಾರದಲ್ಲಿ ಅವರ ಬಗ್ಗೆ ಪುನೀತ್ ಅಭಿಮಾನಿಗಳಿಗೆ ಬೇಸರ ಇರಬಹುದು. ಆದರೆ ಇಂತಹ ಕೃತ್ಯಗಳನ್ನು ಸ್ವತಃ ಪುನೀತ್ ಅವರೇ ಸಹಿಸುತ್ತಿರಲಿಲ್ಲ. ಇರುವಷ್ಟು ದಿನ ಪ್ರೀತಿ, ಗೌರವ ಹಂಚಿಕೊಂಡು ಬದುಕೋಣ ಎಂದು ಹೇಳಿದ್ದಾರೆ.