ಶೂಟಿಂಗ್ ದಿನಗಳ ಮೆಲುಕು ಹಾಕಿದ ನಟಿ ಸುಹಾಸಿನಿ
ಮೈಸೂರಿನಲ್ಲಿರುವ ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಕಾವೇರಿ ಗುಣಶೀಲಾ ಐವಿಎಫ್ ವಿನೂತನ ಸೆಂಟರ್ ಅನ್ನು ಹಿರಿಯ ನಟಿ ಸುಹಾಸಿನಿ ಮಣಿರತ್ನಂ ಟೇಪ್ ಕತ್ತರಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿ, ಮಕ್ಕಳ ಎಂದರೆ ಸಂತೋಷದ ಸಂಕೇತ. ಸಾಮಾಜಿಕ ಕಳಂಕವಾಗಿ ಬಂಜೆತನ ಎಂಬುದು ಕಾಣುತ್ತದೆ. ಒಂದು ವಿಶೇಷ ಕೋಣೆಯಲ್ಲಿ ಹೊಸ ಜೀವವನ್ನು ಸೃಷ್ಟಿ ಮಾಡುತ್ತಾರೆ ಎಂಬುದನ್ನು ನೋಡಿದಾಗ ಬಹಳ ಖುಷಿಯಾಯಿತು. ದಂಪತಿಗಳು ಇದನ್ನ ಸದುಪಯೋಗಪಡಿಸಿಕೊಳ್ಳಿ ಎಂದ ಅವರು ಮೈಸೂರು ಎಂದರೆ ನೂರೊಂದು ನೆನಪುಗಳು ಬರುತ್ತವೆ. ಕನ್ನಡದಲ್ಲಿ ಮೊದಲ ಬಂಧನ ಸಿನಿಮಾದ ಮೊದಲ ಶೂಟಿಂಗ್ ಇಲ್ಲಿಯೇ ಆಯಿತು ಎಂದು ಮೆಲುಕು ಹಾಕಿದರು.