ಹಾರ್ದಿಕ್ ಪಾಂಡ್ಯರ 5 ಕೋಟಿ ಬೆಲೆ ವಾಚ್ ವಶಪಡಿಸಿಕೊಂಡ ಕಸ್ಟಮ್ ಅಧಿಕಾರಿಗಳು :

ಹಾರ್ದಿಕ್ ಪಾಂಡ್ಯರ 5 ಕೋಟಿ ಬೆಲೆ ವಾಚ್ ವಶಪಡಿಸಿಕೊಂಡ ಕಸ್ಟಮ್ ಅಧಿಕಾರಿಗಳು :

ಮುಂಬೈ:ಪ್ರಮುಖ ಘಟನೆಯೊಂದರಲ್ಲಿ Team India ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ 5 ಕೋಟಿ ರೂಪಾಯಿ ಮೌಲ್ಯದ ಎರಡು ಕೈಗಡಿಯಾರಗಳನ್ನು(watch) ಕಸ್ಟಮ್ಸ್ ಇಲಾಖೆ(customs department) ವಶಪಡಿಸಿಕೊಂಡಿದೆ. ನವೆಂಬರ್ 14 ರ ಭಾನುವಾರ ರಾತ್ರಿ ಕಸ್ಟಮ್ಸ್ ಅಧಿಕಾರಿಗಳು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಐಸಿಸಿ ಪುರುಷರ T20 ವಿಶ್ವಕಪ್ 2021 (ICC T20 world cup) ರಲ್ಲಿ ಭಾಗವಹಿಸಿದ ನಂತರ ಭಾರತೀಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ದುಬೈನಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಮುಂಬೈ ಕಸ್ಟಮ್ಸ್ ಇಲಾಖೆಯ ಪ್ರಕಾರ, ಅವರ ಬಳಿ ವಾಚ್‌ಗಳ ಬಿಲ್ ರಶೀದಿ ಇರಲಿಲ್ಲ.ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಸ್ಟಮ್ಸ್ ಅಧಿಕಾರಿಗಳು ಹಾರ್ದಿಕ್ ಬಳಿ ಎರಡು ಐಷಾರಾಮಿ ಕೈಗಡಿಯಾರಗಳನ್ನು ಹೊಂದಿದ್ದು, ಅದನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾದರು. ಹಾರ್ದಿಕ್ ಪಾಂಡ್ಯ ವಾಚ್‌ಗಳನ್ನು ಕಸ್ಟಮ್ಸ್ ವಸ್ತುಗಳೆಂದು ಘೋಷಿಸದೆ ಇದ್ದುದರಿಂದ ತೊಂದರೆಗೆ ಕಾರಣವಾಯಿತು. ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಗಮನಾರ್ಹವಾಗಿ, ಹಾರ್ದಿಕ್ ದುಬಾರಿ ವಾಚ್‌ಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಅವರ ಬಳಿ ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711 ಇದೆ - ಇದರ ಬೆಲೆ 5 ಕೋಟಿ ರೂ ಆಗಿದೆ.