ಜಡೇಜ ಬೆರಳಿಗೆ ಮುಲಾಮು?

ನಾಗಪುರ: ಆಸ್ಟ್ರೇಲಿಯಾ ತಂಡದ ವಿರುದ್ಧ ಐದು ವಿಕೆಟ್ ಗಳಿಸಿದ ಭಾರತದ ರವೀಂದ್ರ ಜಡೇಜ ತಮ್ಮ ಎಡಗೈ ಬೆರಳಿಗೆ 'ಮುಲಾಮು' ಹಚ್ಚಿಕೊಂಡು ಬೌಲಿಂಗ್ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಜಡೇಜ ಅವರು ತಮ್ಮ ಸಹ ಆಟಗಾರ ಮೊಹಮ್ಮದ್ ಸಿರಾಜ್ ಅವರು ಕೊಟ್ಟ ಮುಲಾಮನ್ನು ಎಡಗೈ ತೋರುಬೆರಳಿಗೆ ಉಜ್ಜಿಕೊಂಡಿರುವುದು ದಾಖಲಾಗಿದೆ.
'ಜಡೇಜ ಅವರ ಬೆರಳಿನ ನೋವಿನ ಶಮನಕ್ಕಾಗಿ ಮುಲಾಮು ಲೇಪಿಸಲಾಗಿದೆ' ಎಂದು ಬಿಸಿಸಿಐ ಮೂಲಗಳು ಪ್ರತಿಕ್ರಿಯಿಸಿವೆ.