ಕವಿವಿ ಕುಲಪತಿ ಕೆ.ಬಿ.ಗುಡಸಿ ಅವರಿಗೆ ಗೌರವ ಫೆಲೋಶಿಪ್ ಲಭಿಸಿದೆ
ಸಂಶೋಧನೆ ಮತ್ತು ವಿಜ್ಞಾನಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರೊ. ಕೆ.ಬಿ.ಗುಡಸಿ ಅವರಿಗೆ ಗೌರವ ಫೆಲೋಶಿಪ್ ನೀಡಲಾಗಿದೆ. ರಾಜ್ಯದ ವಿವಿಧ ವಲಯದ ವಿಜ್ಞಾನಿಗಳನ್ನು, ವಿಜ್ಞಾನ ಪರಿಣಿತರನ್ನು ಮತ್ತು ವಿಜ್ಞಾನ ಸಂವಹನಕಾರರನ್ನು ಗುರುತಿಸಿ ಫೆಲೋಶಿಪ್ ಮತ್ತು ಪ್ರಶಸ್ತಿಗಳನ್ನು ಶಿಫಾರಸ್ಸು ಮತ್ತು ಆಯ್ಕೆ ಮಾಡಲು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಆಯ್ಕೆಯ ಮಂಡಳಿಯ (ಹಾನ್ರರಿ ಫೆಲೋಶಿಫ್) ಗೌರವ ಸದಸ್ಯರಾಗಿ ನಿಯುಕ್ತಿಗೊಂಡಿದ್ದಾರೆ. ಬರುವ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಪ್ರೊ.ಕೆ.ಬಿ.ಗುಡಸಿ ಅವರಿಗೆ ಗೌರವ ಫೆಲೋಶಿಪ್ ಅನ್ನು ಪ್ರದಾನ ಮಾಡಲಾಗುವದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಚೇರಮನ್ ಪ್ರೊ.ಎಸ್ ಅಯ್ಯಪ್ಪನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ..