ಹುಬ್ಬಳ್ಳಿಯಲ್ಲಿ "ನಖಲಿ ನೋಟು" ಜಾಲ ಪತ್ತೆ; ಆರೋಪಿಗಳ ಬಂಧನ!

ಹುಬ್ಬಳ್ಳಿಯಲ್ಲಿ "ನಖಲಿ ನೋಟು" ಜಾಲ ಪತ್ತೆ; ಆರೋಪಿಗಳ ಬಂಧನ!

ಹುಬ್ಬಳ್ಳಿ:- ಹಳೇಬಸ್ ನಿಲ್ದಾಣ ಬಳಿಯ ಲಾಡ್ಜ್‌ವೊಂದರಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಪೊಲೀಸರು, ಅವರಿಂದ 200 ಮತ್ತು 100 ಮುಖಬೆಲೆ ಒಟ್ಟು 34,700 ಖೋಟಾ ನೋಟು ವಶಪಡಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಶಿವಾನಂದ ಕಾರಜೋಳ (27), ವಿಜಯಪುರದ ಕಲ್ಲಯ್ಯ ಪಟ್ಟದಮಠ(29) ಹಾಗೂ ಉತ್ತರ ಕನ್ನಡದ ಗುರುರಾಜ ಬಂಧಿತ ಆರೋಪಿಗಳು.ಮಾಹಿತಿ ಪಡೆದು ಲಾಡ್ಜ್ ಮೇಲೆ ದಾಳಿ ನಡೆಸಿದ್ದಾರೆ. ಸಂದರ್ಭದಲ್ಲಿ ಈ 200,100 ಮುಖಬೆಲೆ ಒಟ್ಟು 73 ನೋಟ್‌ಗಳನ್ನು, ಒಂದು ಯುಎಸ್‌ಎ ಒನ್ ಮಿಲಿಯನ್ ಡಾಲರ್ ( 1ಲಕ್ಷ ರೂ.) ಕ್ವಾಯಿನ್ ವಶಪಡಿಸಿಕೊಂಡಿದ್ದಾರೆ.ಖೋಟಾ ನೋಟುಗಳನ್ನು ಬೇರೆಡೆಯಿಂದ ತಂದು ಚಲಾವಣೆ ಮಾಡುವ ಉದ್ದೇಶ ಹೊಂದಿದ್ದರು. ಈ ಸಂದರ್ಭದಲ್ಲಿ ಅವರನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಉಪನಗರ ಠಾಣೆ ಪೊಲೀಸರು ಖಚಿತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.