2024ರ ಅಂತ್ಯಕ್ಕೆ ಭಾರತದ ಮೊದಲ ಮಾನವಸಹಿತ ಗಗನಯಾನ: ಇಸ್ರೋ
ಹೊಸದಿಲ್ಲಿ: ಭಾರತದ ಮಹತ್ವಾ ಕಾಂಕ್ಷೆಯ ಮೊದಲ ಮಾನವಸಹಿತ ಗಗನಯಾತ್ರೆ “ಗಗನಯಾನ’ ಯೋಜನೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಪುನಃ ಮುಂದೂಡಿದೆ.
2024ರ ನಾಲ್ಕನೇ ತ್ತೈಮಾಸಿಕದ ವೇಳೆಗೆ ಗಗನಯಾನ ಯೋಜನೆ ಮೂಲಕ ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶ ತಲುಪಲಿದ್ದಾರೆ ಎಂದು ಇಸ್ರೋ ತಿಳಿಸಿದೆ.
ಆಯ್ಕೆ ಯಾಗಿರುವ ಭಾರತೀಯ ವಾಯುಪಡೆಗೆ ಸೇರಿದ ಗಗನಯಾತ್ರಿಗಳು ಈಗಾಗಲೇ ಬೆಂಗಳೂರಿನಲ್ಲಿ ಯೋಜನೆ ಕೇಂದ್ರಿತ ತರಬೇತಿಯಲ್ಲಿ ತೊಡಗಿದ್ದಾರೆ. ಈಗಾಗಲೇ ಇವರು ಮೊದಲ ಹಂತದ ತರಬೇತಿ ಪೂರೈಸಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
“ಭಾರತದ ಮೊದಲ ಮಾನವಸಹಿತ ಗಗನ ಯಾತ್ರೆ “ಎಚ್1′ ಯೋಜನೆಯು 2024ರ 4ನೇ ತ್ರೈಮಾಸಿಕದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಎರಡು ಪರೀಕ್ಷಾರ್ಥ ಉಡಾವಣೆ ನಡೆಸಲಾಗುವುದು.