'ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಟ ನಡೆಯೋದಿಲ್ಲ' : ಬಿ.ಎಸ್ ಯಡಿಯೂರಪ್ಪ

'ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಟ ನಡೆಯೋದಿಲ್ಲ' : ಬಿ.ಎಸ್ ಯಡಿಯೂರಪ್ಪ

ಚಿತ್ರದುರ್ಗ : ಹಣ, ಹೆಂಡ, ಅಧಿಕಾರ, ಜಾತಿ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರಬಹುದು ಎಂದು ಕಾಂಗ್ರೆಸ್ ತಿಳಿದಿತ್ತು, ಆದರೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಟ ನಡೆಯೋದಿಲ್ಲ ಎಂದು ಬಿ.ಎಸ್ ಯಡಿಯೂರಪ್ಪ ಕಿಡಿಕಾರಿದರು.

ಚಿತ್ರದುರ್ಗದ ಹಿರಿಯೂರಿನಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಯಡಿಯೂರಪ್ಪ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಳಿದ ಯೋಜನೆಗಳೆನ್ನಲ್ಲಾ ಮಂಜೂರು ಮಾಡಿದೆ. ಈ ಬಾರಿ ಜಿಲ್ಲೆಯ ಏಳಕ್ಕೆ ಏಳು ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಸಮಾಜದಲ್ಲಿ ಯಾವುದೇ ಜಾತಿ, ಭೇದ ಇಲ್ಲದಂತೆ, ಎಲ್ಲಾ ಸಮುದಾಯದವರು ಒಟ್ಟಾಗಿ ಜೀವನ ನಡೆಸಬೇಕು ಎನ್ನುವುದು ಮೋದಿಯವರ ಅಪೇಕ್ಷೆ ಎಂದು ಹೇಳಿದರು.