ಬ್ರೇಕಿಂಗ್ : ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ ,ಜ.9- ಹಿರಿಯ ನಾಗರಿಕರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿರುವ ಕೇಂದ್ರ ಹಣಕಾಸು ಸಚಿವಾಲಯ 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಆದಾಯ ತೆರಿಗೆ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದೆ.
2023ರ ಬಜೆಟ್‍ಗೂ ಮುನ್ನ ಆದಾಯ ತೆರಿಗೆಯಲ್ಲಿನ ಪರಿಹಾರದ ಕುರಿತು ಚರ್ಚೆಗಳು ನಡೆಯುತ್ತಿದ್ದು ಈ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಿರಿಯ ನಾಗರೀಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ತಮ್ಮ ಆದಾಯದ ಮೂಲವಾಗಿ ಪಿಂಚಣಿ ಮತ್ತು ಬ್ಯಾಂಕ್ ಬಡ್ಡಿಯನ್ನು ಮಾತ್ರ ಹೊಂದಿರುವವರು ಇದಕ್ಕೆ ಅರ್ಹರಾಗಿದ್ದಾರೆ ಇಂತಹವರು ಜೀವನ ನಿರ್ವಹಣೆಗೆ ಅವಲಂಬಿತರಾಗಿರುವುದನ್ನು ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ.ಉದ್ಯೋಗಸ್ಥರು ಆದಾಯ ತೆರಿಗೆ ಸ್ಲ್ಯಾಬ್‍ನಲ್ಲಿ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಅದಕ್ಕೂ ಮುನ್ನವೇ ಹಿರಿಯ ನಾಗರಿಕರ ಪಾಲಿಗೆ ಸಿಹಿಸುದ್ದಿ ಪ್ರಕಟವಾಗಿದೆ. ಫೆಬ್ರವರಿ 1 ರಂದು ವರ್ಷ 2023ರ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಹಲವು ರಿಯಾಯಿತಿ ಜೊತೆಗೆ ಹಲವು ಉತ್ಪನ್ನಗಳ ಮೇಲೆ ವಿಧಿಸಿರುವ ದುಭಾರಿ ಜಿಎಸ್‍ಟಿ ಕಡಿತವಾಗಬಹುದು.