ವೇದಿಕೆಯಲ್ಲೇ ಕಣ್ಣೀರಿಟ್ಟು ಭಾವುಕರಾದ ಜಿ.ಪರಮೇಶ್ವರ್..ಯಾಕೆ ಗೊತ್ತಾ..
ತುಮಕೂರು : ವೇದಿಕೆ ಮೇಲೆಯೇ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಕಣ್ಣೀರಿಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆಯ ಮಾರುತಿ ಕಲ್ಯಾಣ ಮಂಟಪದಲ್ಲಿ ಗೊಲ್ಲ ಸಮುದಾಯದಿಂದ ಸಭೆ ನಡೆದಿತ್ತು.
'ನನ್ನ ಅಭಿಮಾನಿಯೊಬ್ಬರು ನಾನು ಸಿಎಂ ಆಗುವರೆಗೂ ಗಡ್ಡ ತೆಗೆಯಲ್ಲ ಎಂದು ಹರಕೆ ಹೊತ್ತುಕೊಂಡಿದ್ದರು. ಇವತ್ತಿನವರೆಗೂ ಗಡ್ಡ ತೆಗೆಯದೇ ಹಾಗೇ ಇದ್ದಾರೆ. ನನಗೂ ಆತನಿಗೂ ಏನು ಸಂಬಂಧ.ನನ್ನ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡಿದ್ದಾನೆ. ನಾನು ಅವನಿಗೆ ಏನು ಕೊಟ್ಟಿದ್ದೀನಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ ವೇದಿಕೆ ಮೇಲೆ ಪರಮೇಶ್ವರ್ ಭಾವುಕರಾದರು