ಸಿದ್ದರಾಮಯ್ಯ ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ; ನಳಿನ್ ಕುಮಾರ್ ಕಟೀಲ್ ಕಿಡಿ
ಹಾವೇರಿ: ಬಿಜೆಪಿ ಸಂಕಲ್ಪ ಸುಳ್ಳಿನ ಯಾತ್ರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಹುಟ್ಟೇ ಸುಳ್ಳು. ಅವರ ಜೀವನದಲ್ಲಿ ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.ಸಿದ್ದರಾಮಯ್ಯನ ಜೀವಮಾನದಲ್ಲಿ ಸತ್ಯ ಯಾವುದು ಹೇಳುತ್ತಾರೆ ಅಂದರೆ ನಾನು ಸಿದ್ದರಾಮಣ್ಣ ಅನ್ನೋದನ್ನು ಮಾತ್ರ ಸತ್ಯ ಹೇಳುತ್ತಾರೆ.
ಬಾಕಿದೆಲ್ಲ ಸುಳ್ಳು ಹೇಳುತ್ತಾರೆ. ಸುಳ್ಳು ಸಿದ್ದರಾಮಣ್ಣ. ಅವರ ಭಾರತ್ ಜೋಡೋ ಯಾತ್ರೆ ಸುಳ್ಳು ಯಾತ್ರೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ ಅಕ್ಟೋಬರ್ 11ರಂದು ಹಲ್ಲೆಗೆ ಒಳಗಾಗಿದ್ದ ಐವರು ಆರ್‌ಎಸ್‍ಎಸ್ ಕಾರ್ಯಕರ್ತರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.