ದೇಗುಲದೊಳಗೆ ಶೂ ಹಾಕಿಕೊಂಡೇ ದೇವರ ದರ್ಶನ ಪಡೆದ ಸಚಿವ! ಪ್ರಭು ಚವ್ಹಾಣ್ ವಿರುದ್ಧ ಭಕ್ತರ ಆಕ್ರೋಶ
ಹಾವೇರಿ: ಸಚಿವ ಪ್ರಭು ಚವ್ಹಾಣ್ ದೇಗುಲದೊಳಗೆ ಶೂ ಹಾಕಿಕೊಂಡೇ ದೇವರ ದರ್ಶನ ಪಡೆದಿದ್ದು, ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. ಕೋಟೆ ಆವರಣದಲ್ಲಿರುವ ನಗರೇಶ್ವರ ಸ್ವಾಮಿಯ ದರ್ಶನ ಪಡೆಯುವಾಗ ಸಚಿವರು ಶೂ ಹಾಕಿಕೊಂಡೇ ಇದ್ದರು. ದೇವಸ್ಥಾನದ ಒಳಗೂ ಶೂ ಹಾಕಿಕೊಂಡೇ ನಡೆದಾಡಿದ್ದಾರೆ.
ಸಿಎಂ ತವರು ಕ್ಷೇತ್ರದಲ್ಲಿ ಪ್ರಭು ಚವ್ಹಾಣ್ರ ಈ ಎಡವಟ್ಟು ಕೆಲಸಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೇವಸ್ಥಾನದ ರೀತಿ-ನೀತಿ- ಸಂಪ್ರದಾಯ ಒಬ್ಬ ಸಚಿವನಿಗೆ ಗೊತ್ತಿಲ್ವಾ? ರಾಜರ ಆಡಳಿತದ ಕಾಲದಲ್ಲಿ ಕೋಟೆ ಆವರಣದ ನಗರೇಶ್ವರ ದೇವಸ್ಥಾನದಲ್ಲಿ ಋಷಿಮುನಿ, ಸಾಧು-ಸಂತರಿಂದ ಹೋಮ, ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದವು. ಇಂತಹ ಪವಿತ್ರ ಸ್ಥಳದಲ್ಲಿ ಸಚಿವರು ಶ್ರಾವಣ ಮಾಸದಲ್ಲಿ ಶೂ ಹಾಕಿಕೊಂಡೇ ಸುತ್ತಾಡಿರುವುದು ಖಂಡನೀಯ ಎಂದು ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ಭುಗಿಲೆದ್ದಿದೆ.