ಪ್ರವಾಸಿ ಮಂದಿರ ಬೀಳಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ವಿರೋಧ | Rattihalli |

ಸ್ವಾತಂತ್ರ ಪೂರ್ವ ಇತಿಹಾಸ ಇರುವ ಪ್ರವಾಸಿ ಮಂದಿರ ಕೆಡವಿ, ನೂತನ ಕಟ್ಟಡ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆ ತಯಾರಿ ನಡೆಸಿದ್ದು, ಈ ಕಾಮಗಾರಿಗೆ ರಟ್ಟೀಹಳ್ಳಿ ಪಟ್ಟಣದ ಕೆಲ ಸಾರ್ವಜನಿಕರಿಂದ ವಿರೋಧ ವ್ಯಕ್ತಪಡಿಸಿದ್ದಾರೆ. ಉದ್ಯಾನವನದಂತಿರುವ ಪ್ರವಾಸಿ ಮಂದಿರ, ಬ್ರಿಟಿμï ಕಾಲದ ಸುಂದರ ಕಟ್ಟಡವನ್ನು ಬೀಳಿಸಬಾರದು. ಹತ್ತಾರು ಸಾರ್ವಜನಿಕರಿಗೆ ವಾಯು ವಿಹಾರಕ್ಕೆ, ಮಕ್ಕಳಿಗೆ ಆಟವಾಡುವ ಸುಂದರ ತಾಣ ಇದಾಗಿದೆ. ಯಾವ ಕಾರಣಕ್ಕೂ ಹಳೆ ಪ್ರವಾಸಿ ಮಂದಿರ ಬೀಳಿಸಬಾರದು ಎಂದು ಸ್ಥಳೀಯರಾದ ರಾಜು ವೆರ್ನೆಕರ್, ಮೃತ್ಯುಂಜಯ ಬೆಣ್ಣಿ ವಿರೋಧ ವ್ಯಕ್ತಪಡಿಸಿದರು.