ವಿಪಕ್ಷ ನಾಯಕ ಸಿದ್ಧರಾಮಯ್ಯರ ಬಿಟ್ಟ ಬಾಗಿನ ಅಪವಿತ್ರ, ಸಿದ್ದು ಹಂಗಿಸಿದ ಸಂಸದ ಮುನಿಸ್ವಾಮಿ
ಬರದ ನಾಡು ಕೋಲಾರ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೆಸಿ ವ್ಯಾಲಿ ಇಲ್ಲಿನ ಸೇರಿ ಕೆರೆ ಕುಂಟೆಗಳು ತುಂಬಿ ಹರಿಯುತ್ತಿವೆ. ಆದರೆ ತುಂಬಿದ ಕೆರೆಗಳಿಗೆ ಇದೀಗ ಭಾಗೀನ ಅರ್ಪಿಸೋದ್ರಲ್ಲಿ ರಾಜಕೀಯ ಶುರುವಾಗಿದೆ. ಕೆರೆ ತುಂಬಿದಾಗ ಸಹಜವಾಗಿಯೇ ಜನ್ರಿಗೆ ಖುಷಿ. ಅದಕ್ಕೆ ಭಾಗೀನ ಅರ್ಪಿಸಿ ಗಂಗಾ ಮಾತೆಗೆ ಪೂಜಿಸುವುದು ಈ ನೆಲದ ಸಾಂಸ್ಕೃತಿಕ ಪರಂಪರೆ. ಕಳೆದ ತಿಂಗಳಷ್ಟೇ ಕೆರೆ ತುಂಬಿ ಕೋಡಿ ಹರಿದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರಿನ ದೊಡ್ಡ ಶಿವಾರ ಕೆರೆಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಭಾಗೀನ ಅರ್ಪಿಸಿದ್ದರು. ಅದು ಅಪವಿತ್ರ ಭಾಗೀನ ಎಂದು ಹೇಳಿದ ಸಂಸದ ಮುನಿಸ್ವಾಮಿ ಇಂದು ತಾವು ಪ್ರತ್ಯೇಕವಾಗಿ ಬಾಗೀನ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ. ನಾವು ಅರ್ಪಿಸಿದ್ದೇ ಗಂಗಾಮಾತೆಗೆ ಹಿಂದೂ ಸಂಪ್ರದಾಯದ ಪ್ರಕಾರ ಪವಿತ್ರ ಭಾಗೀನ ಎಂದು ಕೋಲಾರ ಸಂಸದ ಎಸ್. ಮುನಿಸ್ವಾಮಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ನವರನ್ನು ಪರೋಕ್ಷವಾಗಿ ಕುಟುಕಿದ್ದಾರೆ. ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಗ್ರಾಮದ ಅಮಾನಿಕೆರೆಗೆ ಭಾಗೀನ ಅರ್ಪಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹೀಗೆ ತಮ್ಮ ಅಭಿಪ್ರಾಯವನ್ನುವ್ಯಕ್ತಪಡಿಸಿದ್ರು. ಆದ್ರೆ ಇದಕ್ಕೆ ಮಾಲೂರು ಶಾಸಕ ನಂಜೆಗೌಡ ಟಾಂಗ್ ನೀಡಿದ್ದಾರೆ. ಒಟ್ಟಾರೆ, ಕೆರೆಗಳಿಗೆ ಬಾಗೀನ ಅರ್ಪಿಸುವ ವಿಷಯದಲ್ಲೂ ಭಾರಿ ರಾಜಕೀಯ ನಡೆಯುತ್ತಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.