ರಸ್ತೆ ಮಾರ್ಗ ಮಧ್ಯದಲ್ಲಿಯೇ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಿದ ಶಾಸಕ ಖಂಡ್ರೆ
ಗಡಿ ಬೀದರ ಜಿಲ್ಲೆಯ ಭಾಲ್ಕಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಇಂಚೂರು ಕ್ರಾಸ್ ರಸ್ತೆ ಮಾರ್ಗ ಮಧ್ಯದಲ್ಲಿ ಬಸ್ಸ್ ಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದರು ಈ ಸಂದರ್ಭದಲ್ಲಿ ತಕ್ಷಣವೇ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದ ಕೆಪಿಸಿಸಿ ಕಾರ್ಯಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಅವರು ಪರಿಹರಿಸುವ ಮೂಲಕ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗೋರಚಿಂಚೋಳಿ ಗ್ರಾಮಕ್ಕೆ ಗುರುವಾರ ಶಾಸಕರು ಅನ್ಯ ಕಾರ್ಯಕ್ರಮ ನಿಮಿತ್ಯ ಹೋಗುವ ಸಂದರ್ಭದಲ್ಲಿ ಇಂಚೂರು ಕ್ರಾಸ್ ನಿಂದ ಗೊರಚಿಂಚೋಳಿ ರಸ್ತೆಯ ಮಾರ್ಗ ಮಧ್ಯದಲ್ಲಿ ವಿದ್ಯಾರ್ಥಿಗಳು ನಡ್ಕೊಂಡು ಮನೆಗೆ ಮರಳುತ್ತಿರುವುದನ್ನು ಕಂಡ ಶಾಸಕರು ತಕ್ಷಣಕ್ಕೆ ತಮ್ಮ ಕಾರ್ ನಿಲ್ಲಿಸಿ ವಿದ್ಯಾರ್ಥಿಗಳಿಗೆ ನಡ್ಕೊಂಡು ಎಲ್ಲಿಗೆ ಹೊರಟಿದ್ದೀರಿ ಎಂದು ವಿಚಾರಿಸಿದರು. ವಿದ್ಯಾರ್ಥಿಗಳು ಗ್ರಾಮಕ್ಕೆ ಬಸ್ ಬರದಿರುವ ಬಗ್ಗೆ ಗೋಳು ತೋಡಿಕೊಂಡರು ಶಾಸಕರು ತಕ್ಷಣ ಬಸ್ ಡಿಪೋ ವ್ಯವಸ್ಥಾಪಕರಿಗೆ ಮೊಬೈಲ್ ಕರೆ ಮಾಡಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿವರಿಸಿ ನಾಳೆಯಿಂದಲೇ ಶಾಲಾ-ಕಾಲೇಜು ಸಮಯ ನೋಡಿಕೊಂಡು ಸರಿಯಾದ ಸಮಯಕ್ಕೆ ಯಾವುದೇ ಸಬೂಬು ನೀಡದೇ ಗೋರಚಿಂಚೋಳಿ ಗ್ರಾಮಕ್ಕೆ ಬಸ್ ಆರಂಭಿಸುವಂತೆ ಸೂಚನೆ ನೀಡಿದ್ದು ವಿದ್ಯಾರ್ಥಿಗಳ ಪ್ರಂಶನೀಗೆ ಕಾರಣವಾಯಿತು.