ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಖಿ ಕಟ್ಟಿದ ಬ್ರಹ್ಮಕುಮಾರಿ ಸಹೋದರಿಯರು | Hubli |

ಅಣ್ಣ ತಂಗಿಯ ಪವಿತ್ರ ಸಂಬಂಧ ಸಾರುವ ರಕ್ಷಾ ಬಂಧನದ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬ್ರಹ್ಮಕುಮಾರಿಯರು ರಾಖಿ ಕಟ್ಟಿ ಶುಭ ಹಾರೈಸಿದ್ದಾರೆ. ಬೆಳಿಗ್ಗೆಯಿಂದಲೇ ಹುಬ್ಬಳ್ಳಿ ಆದರ್ಶನಗರದಲ್ಲಿನ ಮನೆ ಬಳಿ ಬಸವರಾಜ ಬೊಮ್ಮಾಯಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಬಗ್ಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿಯಲ್ಲಿ ಚುನಾವಣೆ ನೀತಿ ಸಂಹಿತೆ ಇದೆ. ಹೀಗಾಗಿ ನಾನು ಏನನ್ನು ಮಾತನಾಡೋದಿಲ್ಲ. ವಿಪಕ್ಷಗಳ ನಿಯೋಗ ಜಾತಿಗಣತಿ ಪ್ರಧಾನಿಗಳ ಭೇಟಿಗೆ ಮುಂದಾಗಿವೆ. ಭೇಟಿ ಮಾಡಲಿ ಎಂದು ಹೇಳಿದ್ದಾರೆ.