ಚುನಾವಣೆ ಪ್ರಚಾರ ಕೈಗೊಂಡ ಸ್ವತಂತ್ರ ಅಭ್ಯರ್ಥಿ ಜಯಶ್ರೀ ಪವಾರ | Dharwad |

ವಾರ್ಡ್ 1 ರ ಸ್ವತಂತ್ರ ಅಭ್ಯರ್ಥಿ ಪವಾರಗೆ ವಾರ್ಡ್ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವಾರ್ಡಿನ ಸಮಗ್ರ ಅಭಿವೃದ್ಧಿಯೇ ನನ್ನ ಧ್ಯೇಯ. ಮೊದಲಿನಿಂದಲೂ ಇದೇ ವಾರ್ಡಿನಲ್ಲಿ ಹುಟ್ಟಿ ಬೆಳೆದಳಾಗಿರುವುದರಿಂದ ಈ ವಾರ್ಡಿನ ಸಮಸ್ಯೆ ನನಗೆ ತಿಳಿದಿದೆ. ಹಾಗಾಗಿ ಈ ವಾರ್ಡಿನ ಎಲ್ಲಾ ಸಮಸ್ಯೆಗಳನ್ನು ನಾನು ಬಗೆಹರಿಸುವ ವಿಶ್ವಾಸ ಜನರಲ್ಲಿದೆ ಎಂದು ಪಾಲಿಕೆ ಚುನಾವಣೆಯ ವಾರ್ಡ್ ನಂಬರ್ 1ರ ಪಕ್ಷತರ ಅಭ್ಯರ್ಥಿ ಜಯಶ್ರೀ ಪವಾರ ಹೇಳಿದ್ದಾರೆ. ಇನ್ನು ತಮ್ಮ ವಾರ್ಡಿನಲ್ಲಿ ಪ್ರಚಾರದ ಸಮಯದಲ್ಲಿ ಮಾತನಾಡಿದ ಅವರು, ಮತದಾರರ ಮನಸ್ಸು ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ. ಈ ವಾರ್ಡಿನಲ್ಲಿ ತುಂಬಾ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಇಂತವಗಳನ್ನು ಅರಿತು ಆದಷ್ಟು ಬೇಗ ಪರಿಹಾರ ಮಾಡಿ ಜನರ ಸೇವೆ ಮಾಡುತ್ತೇನೆ ಎಂದರು. 1ನೇ ವಾರ್ಡಿನ ಸಮಗ್ರ ಗುರುಹಿರಿಯರ ಸಲಹೆ ಆಶೀರ್ವಾದದ ಮೇರೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಜಯಶ್ರೀ ಪವಾರ ಅವರನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ನಮ್ಮ ವಾರ್ಡಿನ ಸಮಸ್ಯೆ ಬಗ್ಗೆ ಅರಿವಿದೆ, ಆ ದೃಷ್ಟಿಯಿಂದ ಇವರು ಬಹುಮತದಿಂದ ಆಯ್ಕೆಯಾಗುತ್ತಾರೆ. ಇದರಲ್ಲಿ ಎರಡು ಮಾತಿಲ್ಲ ಎಂದು ಬಸವರಾಜ ಕೊರವರ ಹೇಳಿದರು.