ನಾನು ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿ' ಎಂದು ಕೇಳಿಕೊಂಡ ರೌಡಿ ಶೀಟರ್‌

ನಾನು ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿ' ಎಂದು ಕೇಳಿಕೊಂಡ ರೌಡಿ ಶೀಟರ್‌

ಮೈಸೂರು: ರಾಜ್ಯದಲ್ಲಿ ರೌಡಿ ಶೀಟರ್‌‌‌‌ ಪಾಲಿಟಿಕ್ಸ್‌‌‌ ಜೋರಾಗಿದೆ. ಬಿಜೆಪಿಗೆ ರೌಡಿ ಶೀಟರ್‌‌ಗಳು ಸೇರ್ಪಡೆಯಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇಲ್ಲೊಬ್ಬ ಭೂಪ, ನಾನು ರೌಡಿ, ನನ್ನನ್ನೂ ಬಿಜೆಪಿಗೆ ಸೇರಿಸಿ ಎಂದು ಬೋರ್ಡ್‌‌ ಹಿಡಿದು ನಿಂತುಕೊಂಡಿದ್ದಾನೆ. ಮೈಸೂರಿನ ನ್ಯಾಯಾಲಯದ ಮುಂದೆ ಇರುವ ಗಾಂಧಿ ಪ್ರತಿಮೆ ಬಳಿ ಪಾನಿಪುರಿ ಮಂಜು, ನನ್ನನ್ನೂ ಬಿಜೆಪಿಗೆ ಸೇರಿಸುವಂತೆ ಬೋರ್ಡ್‌ ಹಿಡಿದು ಪ್ರದರ್ಶನ ಮಾಡಿದ್ದಾನೆ. ಆತನನ್ನು K.R. ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.