ಅಕ್ಟೋಬರ್ 21 ರಿಂದ ಬೆಂಗಳೂರು ಮೆಟ್ರೋಗೆ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್!

ಅಕ್ಟೋಬರ್ 21 ರಿಂದ ಬೆಂಗಳೂರು ಮೆಟ್ರೋಗೆ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್!

ಬೆಂಗಳೂರು: ಬೆಂಗಳೂರು ಮೆಟ್ರೋ ಸೇವೆ ಪ್ರಾರಂಭವಾಗಿ 10 ವರ್ಷಗಳು ಪೂರ್ಣಗೊಳ್ಳುತ್ತಿರುವ ಅಂಗವಾಗಿ ಬಿಎಂಆರ್ ಸಿಎಲ್ ಅ.21 ರಂದು, ಬಹುನಿರೀಕ್ಷಿತ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ನ್ನು ಬಿಡುಗಡೆ ಮಾಡುತ್ತಿದೆ.

ಒಂದು ದೇಶ, ಒಂದು ಕಾರ್ಡ್ ಬಹು ನಿರೀಕ್ಷಿತವಾಗಿದ್ದು ಮೊದಲ ಬ್ಯಾಚ್ ನಲ್ಲಿ 25,000 ಕಾರ್ಡ್ ಗಳನ್ನು ಬಿಎಂಆರ್ ಸಿಎಲ್ ತರಿಸಿಕೊಳ್ಳಲಾಗುತ್ತಿದೆ. ಆದರೆ ಇವುಗಳನ್ನು ಗ್ರಾಹಕರಿಗೆ ತಲುಪಿಸುವುದಕ್ಕೆ ಬಿಎಂಟಿಸಿ ಇನ್ನೂ ಸಿದ್ಧಗೊಂಡಿಲ್ಲ.

ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಎಂದರೇನು?

ರುಪೇ ಪೇಮೆಂಟ್ ವ್ಯವಸ್ಥೆಯ ಆಧಾರದಲ್ಲಿ ಈ ಕಾರ್ಡ್ ಕಾರ್ಯನಿರ್ವಹಣೆ ಮಾಡಲಿದ್ದು ಬಸ್, ಪಾರ್ಕಿಂಗ್, ಎಲ್ಲಾ ಕಡೆಯ ಮೆಟ್ರೋ ನೆಟ್ವರ್ಕ್, ರೀಟೇಲ್ ಶಾಪಿಂಗ್ ಗಳಲ್ಲಿ ಒಂದೇ ಕಾರ್ಡ್ ಮೂಲಕ ವ್ಯವಹರಿಸಬಹುದಾಗಿದೆ.

ಎನ್ ಸಿಎಂಸಿಯ ಬಗ್ಗೆ ಬಿಎಂಆರ್ ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾತನಾಡಿದ್ದು, ಮೊದಲ ಹಂತದ ಮೆಟ್ರೋ ನಿಲ್ದಾಣದಲ್ಲಿ ಸ್ವಯಂಚಾಲಿತ ಪಾವತಿ ಗೇಟ್ ಗಳನ್ನು ಎನ್ ಸಿಎಂಸಿ ಕಾರ್ಡ್ ಗಳ ಬಳಕೆಗೆ ಅನುಗುಣವಾಗಿ ಬದಲಾವಣೆ ಮಾಡಲಾಗಿದೆ. ಎರಡನೇ ಹಂತದ ಮೆಟ್ರೋ ಸ್ಟೇಷನ್ ಗಳಲ್ಲಿ ಸಿದ್ಧಗೊಂಡಿದೆ. ರುಪೇ ಡೆಬಿಟ್ ಕಾರ್ಡ್ ಗಳು ಎಲ್ಲಾ ಬ್ಯಾಂಕ್ ಹಗೂ ಮೆಟ್ರೋ ಸ್ಟೇಷನ್ ಗಳಲ್ಲಿ ಲಭ್ಯವಿರಲಿದೆ" ಎಂದು ಅಂಜುಮ್ ಪರ್ವೇಜ್ ಹೇಳಿದ್ದಾರೆ. ಎನ್ ಸಿಎಂಸಿ ಬೆಲೆ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಅವರು, ಈ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿದೆ. ಆದರೆ ಅಂತಿಮವಾಗಿಲ್ಲ ಎಂದು ಹೇಳಿದ್ದಾರೆ.