ಬೆಂಗಳೂರಿನಲ್ಲಿ ಅಗ್ನಿ ಅವಘಡ : 2 ಫ್ಲ್ಯಾಟ್​ ಗಳಿಗೆ ಹೊತ್ತಿಕೊಂಡ ಬೆಂಕಿ

ಬೆಂಗಳೂರಿನಲ್ಲಿ ಅಗ್ನಿ ಅವಘಡ : 2 ಫ್ಲ್ಯಾಟ್​ ಗಳಿಗೆ ಹೊತ್ತಿಕೊಂಡ ಬೆಂಕಿ

ಬೆಂಗಳೂರು : ಎಲೆಕ್ಟ್ರಾನಿಕ್​ ಸಿಟಿಯಲ್ಲಿರುವ ಅಪಾರ್ಟ್​ಮೆಂಟ್ ಒಂದರಲ್ಲಿ ಬುಧವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, 2 ಫ್ಲಾಟ್ ಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ವಸುಂಧರಾ ಲೇಔಟ್​ನ ವಿ ಮ್ಯಾಕ್ಸ್ ಚಾಲೇಟ್ ಅಪಾರ್ಟ್​​ಮೆಂಟ್​ನಲ್ಲಿ ಅಗ್ನಿ ಅವಘಡವಾಗಿದ್ದು, ಬೆಂಕಿ ಎರಡು ಫ್ಲ್ಯಾಟ್​ಗಳಿಗೆ ವ್ಯಾಪಿಸಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜನರು ಹೊರಗೆ ಓಡಿ ಬಂದಿದ್ದು, ಇದುವರೆಗೆ ಯಾವುದೇ ಪ್ರಾಣಾಪಾಯವಾದ ಬಗ್ಗೆ ವರದಿಯಾಗಿಲ್ಲ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.