ಎಸ್.ಆರ್. ಪಾಟೀಲ್ ಮನವೊಲಿಕೆಗೆ ಕೈ ನಾಯಕರ ಕಸರತ್ತು!

ಎಸ್.ಆರ್. ಪಾಟೀಲ್ ಮನವೊಲಿಕೆಗೆ ಕೈ ನಾಯಕರ ಕಸರತ್ತು!

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಎಸ್.ಆರ್. ಪಾಟೀಲ್ ಮನವೊಲಿಕೆಗೆ ಕೈ ಪಕ್ಷದ ನಾಯಕರು ಕಸರತ್ತು ನಡೆಸುತ್ತಿದ್ದಾರೆ.

ಶನಿವಾರ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಡಾ.

ಜಿ. ಪರಮೇಶ್ವರ, ಮಾಜಿ ಶಾಸಕ ಜೆ.ಟಿ. ಪಾಟೀಲ್ ಅವರು ಎಸ್.ಆರ್.ಪಾಟೀಲ್ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಮನವೊಲಿಕೆ ಯತ್ನ ನಡೆಸಿದರು.

ಬೇಸರಗೊಂಡಿರುವ ಎಸ್.ಆರ್.ಪಾಟೀಲ್ ಪ್ರಚಾರದಿಂದ ದೂರ ಉಳಿದರೆ ಫಲಿತಾಂಶದ ಮೇಲೆ ಪರಿಣಾಮದ ಆತಂಕ ಕಾಂಗ್ರೆಸ್ ಗೆ ಎದುರಾಗಿದೆ. ಬಿಜೆಪಿ ನಾಯಕರು ಎಸ್.ಆರ್.ಪಾಟೀಲ್ ಅವರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ಭೇಟಿ ಮಾಡಿ ಮನವೊಲಿಕೆ ಯತ್ನ ನಡೆಸಿದ್ದಾರೆ.