ಗಂಟಲಲ್ಲಿ ಚಾಕ್ಲೇಟ್ ಸಿಲುಕಿ ಬಾಲಕ ಉಸಿರುಗಟ್ಟಿ ಸಾವು
ಪೋಷಕರೇ. . . ಮಕ್ಕಳಿಗೆ ಯಾವುದೇ ಸಿಹಿ ತಿನಿಸುಗಳನ್ನು ತಿನ್ನೋದಕ್ಕೆ ಕೊಡುವ ಮೊದಲು ಜಾಗೃತರಾಗಬೇಕು. ಏಕೆಂದರೆ, ಚಾಕ್ಲೇಟ್ ತಿನ್ನುವಾಗ ಉಸಿರುಗಟ್ಟಿ 9 ವರ್ಷದ ಬಾಲಕ ಸಂದೀಪ್ ಸಿಂಗ್ ಮೃತಪಟ್ಟ ಘಟನೆ ತೆಲಂಗಾಣದ ವಾರಂಗಲ್ನಲ್ಲಿ ನಡೆದಿದೆ. ವರದಿಗಳ ಪ್ರಕಾರ, ಬಾಲಕ ಚಾಕ್ಲೇಟ್ ತಿನ್ನುತ್ತಿದ್ದಾಗ ಅದು ಆತನ ಗಂಟಲಿನಲ್ಲಿ ಸಿಕ್ಕಿಕೊಂಡಿದೆ. ಬಳಿಕ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಲ್ಲಿ ವೈದ್ಯರು ಆತ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.